Slide
Slide
Slide
previous arrow
next arrow

ರಾಮೋತ್ಸವ: ಅಯೋಧ್ಯೆಯಲ್ಲಿ ಕುಮಟಾದ ತೇಜಸ್ವಿನಿ ಗಾಯನ

300x250 AD

ಕುಮಟಾ: ಇಡೀ ವಿಶ್ವವೇ ಕಾಯುತ್ತಿದ್ದ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯು ಜನವರಿ 22ರಂದು ನೆರವೇರಿದೆ. ಶ್ರೀಬಾಲರಾಮನ ಪ್ರೀತ್ಯರ್ಥವಾಗಿ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣವನ್ನು ನಿರ್ಮಿಸಲು ಉತ್ತರಪ್ರದೇಶ ಸರ್ಕಾರದ ಸಂಸ್ಕೃತಿ ಇಲಾಖೆಯ ಸಂಗೀತ ನಾಟಕ ಅಕಾಡೆಮಿಯವರು ‘ರಾಮೋತ್ಸವ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜನವರಿ 14ರಿಂದ ಮಾರ್ಚ್ 24ರವರೆಗೆ 71 ದಿನಗಳ ಕಾಲ ನಡೆಯಲಿರುವ ರಾಮೋತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಆಹ್ವಾನಿಸಲ್ಪಟ್ಟ ಕಲಾವಿದರಿಂದ ಹಾಗೂ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಕಥಾವಾಚನದಂತಹ ಕಾರ್ಯಕ್ರಮಗಳು ನಡೆಯುತ್ತಿವೆ.
ಇಂತಹ ಅಭೂತಪೂರ್ವ ಕಾರ್ಯಕ್ರಮದಲ್ಲಿ ಕುಮಟಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಯುವ ಪ್ರತಿಭೆ ಕುಮಾರಿ ತೇಜಸ್ವಿನಿ ದಿಗಂಬರ್ ವೆರ್ಣೇಕರ್ ಇವಳು ಆಹ್ವಾನಿತ ಕಲಾವಿದೆಯಾಗಿ ತನ್ನ ಗಾಯನವನ್ನು ಪ್ರಸ್ತುತ ಪಡಿಸಿದಳು. ತೇಜಸ್ವಿನಿಯ ಕಾರ್ಯಕ್ರಮವು ರಾಮೋತ್ಸವದ ಪ್ರಮುಖ ವೇದಿಕೆಯಾದ ಸರಯೂ ನದೀತೀರದಲ್ಲಿರುವ ‘ರಾಮ್ ಕೀ ಪೈಡೀ’ನಲ್ಲಿ ನಡೆಯಿತು. ತನ್ನ ಕಾರ್ಯಕ್ರಮವನ್ನು ತೇಜಸ್ವಿನಿಯು ಶ್ರೀರಾಗದ “ಚಲೋ ರೇ ಮಾಯಿ ರಾಮ ಸಿಯಾ ದರಶನ ಕೊ’ ಎಂಬ ರಚನೆ ಮತ್ತು ತರಾನಾದೊಂದಿಗೆ ಆರಂಭಿಸಿ, ತದನಂತರ ರಾಮನ ಭಜನೆಗಳನ್ನು ಹಾಡಿ ಶ್ರೀಬಾಲರಾಮನ ಕೃಪಾಕಟಾಕ್ಷಕ್ಕೆ ಪಾತ್ರಳಾದಳು. ಇವಳಿಗೆ ತಬಲಾದಲ್ಲಿ ಪಂಕಜ್ ರಾಯ್ ಹಾಗೂ ವಿಘ್ನೇಶ್ ದಿಗಂಬರ್ ವೆರ್ಣೇಕರ್ ಮತ್ತು ಹಾರ್ಮೋನಿಯಂನಲ್ಲಿ ಮೋಹಿತ್ ಸಹಾನಿಯುವರು ಸಹಕರಿಸಿದರು. ತೇಜಸ್ವಿನಿಯು ಕುಮಟಾದ ದಿ.ಶಂಕರ್ ಲಕ್ಷ್ಮಣ್ ವೆರ್ಣೇಕರ್ ಹಾಗೂ ದಿ. ಸುಮಿತ್ರಾಬಾಯಿಯವರ ಮೊಮ್ಮಗಳಾಗಿದ್ದಾಳೆ.

300x250 AD
Share This
300x250 AD
300x250 AD
300x250 AD
Back to top