ಶಿರಸಿ: ತಾಲೂಕಿನ ಕೆರೆಕೈನ ಕವಿತಾ ಶ್ರೀಕರ ಭಟ್ ಅವರನ್ನು ಜಿಲ್ಲಾ ಮಹಿಳಾ ಮೋರ್ಚಾದ ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ.
ಮುಂದಿನ 5 ವರ್ಷ ಅವರ ಕಾರ್ಯಾವಧಿಯಾಗಿದ್ದು, ಈ ಹಿಂದಿನ 5 ವರ್ಷ ಬಿಜೆಪಿ ಶಿರಸಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸ ನಿರ್ವಹಿಸಿರುವುದನ್ನು ಉಲ್ಲೇಖಿಸಬಹುದಾಗಿದೆ. ಅವರ ಪಕ್ಷದ ನಿಷ್ಠಾವಂತ ಕಾರ್ಯವನ್ನು ಗುರುತಿಸಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ್ ಭಟ್ಕಳ ಆಯ್ಕೆ ಮಾಡಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಖಜಾಂಚಿಯಾಗಿ ಕೆರೆಕೈ ಕವಿತಾ ಭಟ್
