Slide
Slide
Slide
previous arrow
next arrow

ಜೊಯಿಡಾದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವಿದೆ: ಆರ್‌ವಿ‌ಡಿ

300x250 AD

ಜೊಯಿಡಾ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಹಿಂದೆ ಜೊಯಿಡಾ ತಾಲೂಕು ಕಾರವಾರ ಮತ ಕ್ಷೇತ್ರದಲ್ಲಿದ್ದಾಗಲೂ ಇಲ್ಲಿ ರಸ್ತೆ ಸೇತುವೆಗಳಿಲ್ಲದ ವೇಳೆಯಲ್ಲಿಯೂ ಇಲ್ಲಿನ ಜನರನ್ನು ಕಾಳಜಿಯಿಂದ  ನೋಡಿಕೊಂಡಿದ್ದೇನೆ ಎಂದು ಶಾಸಕ, ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ಅವರು ಬುಧವಾರ ಜೊಯಿಡಾದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಈಗಾಗಲೇ ಸಾಕಷ್ಟು ರಸ್ತೆ ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಯಾರಿಗೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಆ ದಿಶೆಯಲ್ಲಿ ಕ್ರಮ ಕೈಕೊಳ್ಳಬೇಕಾಗಿದೆ. ಎಲ್ಲಾದರೂ ನೀರಿನ ಸಮಸ್ಯೆ ಇದ್ದರೆ ಕೂಡಲೆ ಗ್ರಾಪಂಗಳಿಗೆ  ಮಾಹಿತಿ ಕಳಿಸಿದರೆ ಅಗತ್ಯ ಕ್ರಮ ಕೈ ಕೊಳ್ಳುತ್ತೇವೆ ಎಂದರು. ಜೊಯಿಡಾದಲ್ಲಿ ಈಗ 3 ಕೋಟಿ ವೆಚ್ಚದಲ್ಲಿ 475 ಮನೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಇಂದು ಚಾಲನೆ ನೀಡಲಾಗಿದ್ದು ಇನ್ನೆರಡು ತಿಂಗಳ ಒಳಗೆ ಇದು ಜಾರಿ ಆಗುತ್ತದೆ. ರಾಮನಗರ , ಜಗಲಬೇಟ ಗ್ರಾಮ ಪಂಚಾಯಿತಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ರೂ28 ಕೋಟಿ ಯೋಜನೆಗೆ ಚಾಲನೆ ನೀಡಿದ್ದು ಸದ್ಯದಲ್ಲೇ ಕೆಲಸ ಪ್ರಾರಂಭವಾಗಲಿದೆ. ಇನ್ನು ಕಾನೆರಿ ಸೇತುವೆಯಿಂದ ಉಳವಿವರೆಗೆ ರಸ್ತೆ ನವೀಕರಣಕ್ಕೆ ರೂ 9 ಕೋಟಿ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ರೂ 2.10 ಕೋಟಿ ನೀಡಲಾಗಿದೆ. ಅವುರಲಿ ಸೇತುವೆ (75 ಲಕ್ಷ) ಮುಕ್ತಾಯವಾಗಿದೆ. ಜೊಯಿಡಾದಲ್ಲಿ 60 ಲಕ್ಷ ರೂಗಳ ಒಳಕ್ರೀಡಾಂಗಣ ಕೆಲಸ ಪ್ರಗತಿಯಲ್ಲಿದೆ.

ಜೊಯಿಡಾಕ್ಕೇ ಹೊಸದಾಗಿ 500 ಮನೆಗಳ ಮಂಜೂರಾತಿ ಯಾಗಿದೆ. ಆಸ್ಪತ್ರೆಯ ಮೇಲ್ದರ್ಜೆ ಕಾಮಗಾರಿ ಪ್ರಗತಿಯಲ್ಲಿದೆ. ಲೋಕೋಪಯೋಗಿ ಇಲಾಖೆಗೆ ರೂ5 ಕೋಟಿ ನೀಡಲಾಗಿದ್ದು ರಸ್ತೆ ಸೇತುವೆ ಕೆಲಸ ನಿರ್ವಹಿಸಲಾಗುವುದು.ಶೆವಾಳಿ,ದೇಸಾಯಿವಾಡ  ರಸ್ತೆ ಸುಧಾರಣೆಗೆ 28 ಲಕ್ಷ,  ಉಳವಿ ಎರಡು ರಸ್ತೆಗೆ 37 ಲಕ್ಷ, ಕಾತೆಲಿ ರಸ್ತೆಗೆ 10 ಲಕ್ಷ,ಸಾಂಗವೆ ರಸ್ತೆಗೆ 15 ಲಕ್ಷ, ಬಾಡಗುಂದ ರಸ್ತೆಗೆ 5 ಲಕ್ಷ, ಸಿಂಗರಗಾಂವ ರಸ್ತೆಗೆ 18 ಲಕ್ಷ,ಮಿನಿ ಬ್ರಿಡ್ಜ್ 15 ಲಕ್ಷ,ಚಾಪೇರಿ ರಸ್ತೆಗೆ 27 ಲಕ್ಷ, ಕಾರಸಿಂಗಳ ರಸ್ತೆಗೆ 10 ಲಕ್ಷ, ಹೆಬ್ಬಾಳ , ಶಿವಪುರ ತಮ್ಮಣಿಗೆ ರಸ್ತೆಗೆ ರೂ.1 ಕೋಟಿ, ನೀಡಲಾಗಿದೆ. ಗಾಂಗೊಡ ಬ್ರಿಡ್ಜ್ ಗೆ 15 ಲಕ್ಷ ಫಿರೆಗಾಳಿ ರಸ್ತೆಗೆ 20 ಲಕ್ಷ ನೀಡಿದ್ದೇವೆ.

ಜೊಯಿಡಾದ ಮಹಾಗಣಪತಿ ದೇವಸ್ಥಾನಕ್ಕೆ 10 ಲಕ್ಷ ಹನುಮಾನ ಮಂದಿರಕ್ಕೆ , ನಾಗನಾಥ ಮಂದಿರ ಮತ್ತು ರಾಮಲಿಂಗ ದೇವಸ್ಥಾನಗಳಿಗೆ ತಲಾ 3 ಲಕ್ಷ ನೀಡಲಾಗಿದೆ. ವಿವಿಧ ಮಜಿದ್‌ಗಳಿಗೆ 15 ಲಕ್ಷ ಶಿಕ್ಷಣ ಇಲಾಖೆಗೆ 25 ಲಕ್ಷ ನೀಡಲಾಗಿದೆ ಎಂದರು.

300x250 AD

ಮುಂದುವರೆದು ಮಾತನಾಡಿದ ದೇಶಪಾಂಡೆ ಕುಣಬಿಗಳನ್ನೂ ಎಸ್. ಟಿ ಗೆ ಸೇರಿಸುವ ಪ್ರಕ್ರಿಯೆ ರಾಜ್ಯ ಸರ್ಕಾರದಿಂದ ಮುಗಿದಿದೆ. ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಸಂಸದರು ಆ ಬಗ್ಗೆ ಪ್ರಯತ್ನ ಮಾಡಬಹುದು. ಇನ್ನೆರಡು ದಿನದಲ್ಲಿ ನಾನು ಪ್ರಧಾನಿ ಅವರಿಗೆ ಪತ್ರ ಬರೆದು ಆಗ್ರಹಿಸುತ್ತೇನೆ. ಹಿಂದೆ ನಮ್ಮ ಸರಕಾರ ಇದ್ದಾಗ ಅಧ್ಯಯನ ನಡೆಸಿ ಕುಣಬಿಗಳು ಎಸ್. ಟಿ ಗೆ ಅರ್ಹತೆ ಹೊಂದಿದ್ದಾರೆ ಎಂದು ತಿಳಿದು ಕ್ರಮ ಕೈ ಕೊಂಡಿದ್ದೇವೆ ಎಂದು ಹೇಳಿದರು.ಮುಂದೆ ಕೂಡ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ , ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಕಳೆದ 3 ದಿನಗಳಿಂದ ಉಪವಾಸ ಸತ್ಯಾಗ್ರಹ. ನಡೆಸುತ್ತಿರುವ ಜಿಲ್ಲಾ ಕುಣಬಿ ಸಮುದಾಯದವರಲ್ಲಿ ಹೋಗಿ ಅವರಿಗೆ ಸಾಂತ್ವನದ ಮಾತುಗಳನ್ನಾಡಿದರು.

Share This
300x250 AD
300x250 AD
300x250 AD
Back to top