Slide
Slide
Slide
previous arrow
next arrow

ಭಾರತ ಕಲೆ,ಸಂಸ್ಕೃತಿ,ಸಂಸ್ಕಾರದಲ್ಲಿ ಶ್ರೀಮಂತ ರಾಷ್ಟ್ರ: ಗಜಾನನ ಹೆಗಡೆ

300x250 AD

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲಾ ಮೈದಾನದಲ್ಲಿ ಯಶಸ್ವಿನಿ ಸಾಂಸ್ಕೃತಿಕ ವೇದಿಕೆಯ 21ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಯಶಸ್ವಿಯಾಗಿ ನಡೆಯಿತು.

ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ  ಖರ್ವಾ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ,ಇಂದಿನ ದಿನಗಳಲ್ಲಿ ಸಂಘ ಕಟ್ಟಿ ಬೆಳೆಸುವುದು ಬಹಳ ಕಷ್ಟವಾದದು.ಆದರೆ ಯಶಸ್ವಿನಿ ವೇದಿಕೆ ಅವರು 21ವರ್ಷ ಉತ್ತಮವಾಗಿ ಕಾರ್ಯಚಟುವಟಿಕೆ ನಡೆಸುತ್ತಿರುವುದು ಗ್ರಾಮಕ್ಕೆ ಹೆಮ್ಮೆಯ ಸಂಗತಿ.ಸ್ಥಳೀಯ ಕಲಾವಿದರು,ಊರಿನ ಹಿರಿಯರನ್ನು ಸೇರಿಸಿ ಸಂಘ ರಚಿಸಿದ್ದಾರೆ.ಕಲೆ ಉಳಿಸುವ ಜತೆಗೆ ಪ್ರತಿಭೆಗಳಿಗೆ ಪ್ರೋತ್ಸಾಹ, ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ. ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಭಿನಂದಿಸಿದರು.

ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಗಜಾನನ ಹೆಗಡೆ ಮಾತನಾಡಿ,ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿರದಿದ್ದರೆ ಮನುಷ್ಯ ಸಕಲ‌ಜೀವಿಗಳಿಗಿಂತ ವಿಭಿನ್ನವಾಗಲಾರ.ಮನುಷ್ಯ ಸಂಘ ಜೀವಿಯಾಗಿ ಕಲೆ,ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿ ಅದರ ಗೀಳನ್ನು ಅಂಟಿಸಿಕೊಂಡು ಬದುಕುವುದೆ ಮಾನವಧರ್ಮ.ಸಾಂಸ್ಕೃತಿಕವಾಗಿ ಬೆಳೆದರೆ  ಆ ಬೆಳವಣಿಗೆಗೆ ಒಂದು ಬೆಲೆ ಇರುತ್ತದೆ.ಭಾರತ ಕಲೆಯಲ್ಲಿ, ಸಂಸ್ಕೃತಿ,ಸಂಸ್ಕಾರದಲ್ಲಿ ಶ್ರೀಮಂತವಾದ ದೇಶ,ಆದರೆ ಪಾಶ್ಚಿಮಾತ್ಯ ಸಂಸ್ಕ್ರತಿ ಗೀಳಿನಿಂದ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು.

ಖ್ಯಾತ ಜ್ಯೋತಿಷಿ ವರದರಾಜ ಭಟ್ಟ ಮಾತನಾಡಿ, ಕಲೆ,ಸಂಸ್ಕ್ರತಿ ಅಭಿವೃದ್ಧಿ ಆಗಬೇಕು ಎನ್ನುವ ಉತ್ತಮ ಧ್ಯೆಯೋದ್ದೇಶಗಳೊಂದಿಗೆ ವೇದಿಕೆ ಮುಂದುವರೆಯುತ್ತಿದೆ ಎಂದು ಅಭಿನಂದಿಸಿದರು. ತಂದೆ-ತಾಯಿ ಆದವರು ಮಕ್ಕಳಿಗೆ ಉತ್ತಮ ಸಂಸ್ಕ್ರತಿ, ಸಂಸ್ಕಾರ ಕಲಿಸಬೇಕು ಎಂದು ಕರೆನೀಡಿದರು.

ನಿವೃತ್ತ ದೈಹಿಕ ಶಿಕ್ಷಕಿ ರಾಜೇಶ್ವರಿ ಹೆಗಡೆ, ರಂಗಕಲಾವಿದರಾದ ನಾಗರಾಜ ಹನ್ಮಂತ ಅಂಬಿಗ, ಶ್ರೀಕಾಂತ ಎಮ್. ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷರಾದ ಆರ್.ಟಿ ಹೆಬ್ಬಾರ್,ಪ್ರತಿಭೆಗೆ ಉತ್ತಮ ವೇದಿಕೆ ನೀಡಿದರೂ ಇಂದು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಯುವ ಜನಾಂಗ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಜೊತೆಗೆ ಕಲೆಗಳ ಉಳಿವಿಗೆ ಸಹಕರಿಸಬೇಕು ಎಂದರು. ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ನಿರ್ದೇಶಕ ಮೋಹನ್ ನಾಯ್ಕ ಪ್ರಾಸ್ತಾವಿಕ ಮಾತನಾಡಿ,ಇಂದು ನಾಟಕರಂಗ,ಕಲೆ ನಶಿಸಿ ಹೋಗುತ್ತಿದೆ.ಇಂತಹ ಕಲೆಗಳ ಊಳಿವಿಗೆ ವೇದಿಕೆ ಹಲವು ವರ್ಷಗಳಿಂದ ಪ್ರೋತ್ಸಾಹ ನೀಡುತ್ತಿದೆ.ಹಲವು ಕಲಾವಿದರ ಪರಿಚಯಿಸಿದೆ.ಮುಂದೆಯು ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದರು.

300x250 AD

ವೇದಿಕೆಯಲ್ಲಿ ಚಿಕ್ಕನಕೋಡ ವಿಎಸ್ಎಸ್ ಮುಖ್ಯಕಾರ್ಯನಿರ್ವಾಹಕ ವಸಂತ ನಾಯ್ಕ, ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಗೌರವಾಧ್ಯಕ್ಷ ಟಿ.ಎಚ್ ಗೌಡ,ನಿರ್ದೇಶಕ ಗಜಾನನ ನಾಯ್ಕ, ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಲ್ ನಾಯ್ಕ ಉಪಸ್ಥಿತರಿದ್ದರು.ವಿಷ್ಣು ಆಚಾರಿ ಪ್ರಾರ್ಥಿಸಿದರು.ದತ್ತಾತ್ರೇಯ ಮೇಸ್ತ ವರದಿ ವಾಚಿಸಿದರು. ಸತ್ಯಪ್ಪ ನಾಯ್ಕ  ಸ್ವಾಗತಿಸಿದರು. ಶಿಕ್ಷಕರಾದ ಡಿ.ಬಿ ಮುರಾರಿ ನಿರೂಪಿಸಿದರು,ಅಶೋಕ್ ರಾಥೋಡ್  ವಂದಿಸಿದರು. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ಯಶಸ್ವಿನಿ ಸಾಂಸ್ಕೃತಿಕ ವೇದಿಕೆ ಹಾಗೂ ಅತಿಥಿ ಕಲಾವಿದರಿಂದ ‘ಕನಿಕರವಿಲ್ಲದ ಧನಿಕರು’ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮನಸೂರೆಗೊಂಡಿತು.

Share This
300x250 AD
300x250 AD
300x250 AD
Back to top