Slide
Slide
Slide
previous arrow
next arrow

ಮಾ.9ರಿಂದ ‘ಗ್ರಾಮೀಣ ರಂಗೋತ್ಸವ’: ನಾಟಕ ಪ್ರದರ್ಶನ, ಕೃತಿ ಬಿಡುಗಡೆ

300x250 AD

ಸಿದ್ದಾಪುರ: ರಂಗಸೌಗಂಧ ಸಿದ್ದಾಪುರ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ  ದಿ.ಹುಲಿಮನೆ ಸೀತಾರಾಮ ಶಾಸ್ತ್ರೀ ನೆನಪಿನಲ್ಲಿ ರಾಜ್ಯ ಮಟ್ಟದ ಮೂರು ದಿನಗಳ ಗ್ರಾಮೀಣ ರಂಗೋತ್ಸವ ತಾಲೂಕಿನ ಹಾರ್ಸಿಕಟ್ಟಾದ ಗಣೇಶ ಮಂಟಪದಲ್ಲಿ ಮಾ.9ರಿಂದ 11ರವರೆಗೆ ಆಯೋಜಿಸಲಾಗಿದೆ ಎಂದು ರಂಗ  ಸೌಗಂಧದ ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಹೇಳಿದರು.

ಪಟ್ಟಣದಲ್ಲಿ ರಂಗೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಕಳೆದ 19ವರ್ಷಗಳಿಂದ ರಂಗ ಶಿಬಿರ, ನಾಟಕ ಸೇರಿದಂತೆ ವಿವಿಧ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ರಂಗಸೌಗಂಧ ತಂಡ ಈ ವರ್ಷ ಗ್ರಾಮೀಣ ಭಾಗವಾದ ಹಾರ್ಸಿಕಟ್ಟಾದಲ್ಲಿ ರಂಗೋತ್ಸವವನ್ನು ನಡೆಸಲಾಗುತ್ತಿದೆ. ಮಾ.9ರಂದು ಸಂಜೆ 6.45ಕ್ಕೆ ರಂಗೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ನಿರ್ದೇಶಕ  ಡಾ.ರಾಮಚಂದ್ರ ಎಂ.ಕೆ ಉದ್ಘಾಟಿಸುವರು. ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ.ಹೆಗಡೆ, ಪತ್ರಕರ್ತ ನಾಗರಾಜ ಮತ್ತಿಗಾರ, ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್ ಉಪಸ್ಥಿತರಿರುತ್ತಾರೆ.ಇದೇ ಸಂದರ್ಭದಲ್ಲಿ ಪತ್ರಕರ್ತ ನಾಗರಾಜ್ ಭಟ್ಟ ಕೆಕ್ಕಾರ ದಂಪತಿಗೆ  ರಂಗ ಗೌರವ ನೀಡಲಾಗುತ್ತದೆ. ನಂತರ ರಂಗ ಸೌಗಂಧ ತಂಡದವರಿಂದ ’36 ಅಲ್ಲ 63′ ನಾಟಕ ಪ್ರದರ್ಶನಗೊಳ್ಳಲಿದೆ.

ಮಾ.10ರಂದು ಸಂಜೆ 6.45ಕ್ಕೆ ಹುಲಿಮನೆ ಸೀತಾರಾಮ ಶಾಸ್ತ್ರಿ ‘ರಂಗಕಥನ’ ಪುಸ್ತಕ ಬಿಡುಗಡೆ ನಡೆಯಲಿದ್ದು ಈ ಸಂದರ್ಭದಲ್ಲಿ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ಪತ್ರಕರ್ತೆ ಭಾರತಿ ಹೆಗಡೆ ಬೆಂಗಳೂರು, ಸಿದ್ದಾಪುರ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರೂಪಾ ಭಟ್ಟ ಉಪಸ್ಥಿತರಿರುತ್ತಾರೆ.ನಂತರ ಪೂಜಾ ರಘುನಂದನ  ಅಭಿನಯದ ‘ತಾಯಿಯಾಗುವುದೆಂದರೆ’  ಎಂಬ ಏಕ ವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ.

300x250 AD

ಮಾ.11ರಂದು ಸಂಜೆ 6.45ಕ್ಕೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎನ್.ಹೊಸ್ಮನಿ ಶಿರಸಿ, ಬನವಾಸಿ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಕೆ.ನಾಯ್ಕ ಹೊಸಳ್ಳಿ, ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಉಪಸ್ಥಿತರಿರುತ್ತಾರೆ. ನಂತರ ಮೈಸೂರಿನ ಇಂಡಿಯನ್ ಥೇಟರ್ ಫೌಂಡೇಶನ್ ಇವರಿಂದ ‘ಕುಪ್ಪಳ್ಳಿ ಪುಟ್ಟ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಗಣಪತಿ ಹೆಗಡೆ ಹುಲಿಮನೆ ಹೇಳಿದರು.
ಶ್ರೀಕಾಂತ ಶಾನಭಾಗ ಹಾರ್ಸಿಕಟ್ಟಾ, ಪೂರ್ಣಚಂದ್ರ ಹೆಗಡೆ ಹುಲಿಮನೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top