Slide
Slide
Slide
previous arrow
next arrow

‘ಸಮಾಜ ಸೇವೆ ಮೂಲಕ ಧರ್ಮ ಕಾರ್ಯದಲ್ಲಿ ತೊಡಗಿಕೊಳ್ಳಿ’

300x250 AD

ಸಿದ್ದಾಪುರ: ಅಶಾಶ್ವತವಾದ ಬದುಕನ್ನು ಹೊಂದಿರುವ ನಾವುಗಳು ಸಮಾಜ ಸೇವೆ ಮೂಲಕ ಧರ್ಮ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿ ನುಡಿದರು.

ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದ ಶ್ರೀ ಚಂಡಿಕಾದೇವಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು ಆದಿಶಕ್ತಿಯ ಮತ್ತೊಂದು ಹೆಸರು ಚಂಡಿಕಾ ದೇವಿ. ಈ ಆಧುನಿಕ ಯುಗದಲ್ಲಿ ಚಂಡಿಕಾದೇವಿ ದೇವಸ್ಥಾನವನ್ನು ಗ್ರಾಮದಲ್ಲಿ ನಿರ್ಮಿಸುವ ಮೂಲಕ ಗ್ರಾಮಸ್ಥರು ಆಧ್ಯಾತ್ಮದ ಕಡೆಗೆ ಹೆಚ್ಚು ಉತ್ಸಾಹ ತೋರುತ್ತಿರುವುದು ಉತ್ತಮ ಕಾರ್ಯ ಎಂದರು. ಅಪೇಕ್ಷೆ ಇಲ್ಲದೆ ಬೇರೆಯವರ ಸೇವೆ ಮಾಡುವುದರ ಜೊತೆಗೆ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಆಧುನಿಕ ಸಮಾಜದಲ್ಲಿ ಜಾತಿ, ಧರ್ಮಗೆಳಲ್ಲವೂ ಅಳಿದು ಹೋಗುತ್ತಿರುವ ಸಂದರ್ಭದಲ್ಲಿ ಜ್ಞಾನವನ್ನು ಬೆಳೆಸಿಕ್ಕೊಳ್ಳಬೇಕಿದೆ. ಜ್ಞಾನ ಎಂಬುದು ಯಾರ ಆಸ್ತಿಯೂ ಅಲ್ಲ. ನಮ್ಮ ಮಕ್ಕಳಿಗೆ ಇದು ಪ್ರಾಪ್ತವಾಗುವಂತೆ ನೋಡಿಕೊಳ್ಳಬೇಕು ಎಂದರು.

ಡಾ. ಉಮೇಶ ಭದ್ರಾಪುರ ಅವರು ರಚಿಸಿರುವ ಕೃತಿಯಲ್ಲಿ ಕರೆ ಒಕ್ಕಲಿಗರ ಉಲ್ಲೇಖ ಆಡುಮಾತಿನಿಂದಾಗಿ ತಪ್ಪಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಖರೆ ಒಕ್ಕಲಿಗರು ಅಂದರೆ ನೈಜತೆ, ಖರೆತನ ಇರುವಂತವರು ಎಂಬುದು ನಿಜವಾದ ಅರ್ಥ. ಆಡು ಮಾತಿನಲ್ಲಿ ಶಬ್ದಗಳು ವ್ಯತ್ಯಾಸವಾಗುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕಿದೆ. ಅಲ್ಲದೆ ಯಾವುದೇ ಸಮುದಾಯದವರು ಕೀಳರಿಮೆಯಿಂದ ನರಳಬಾರದು ಎಂದು ತಿಳಿಸಿದ ಸ್ವಾಮೀಜಿ ಶ್ರೀ ಮಠದಿಂದ ಮುಂದಿನ ದಿನಗಳಲ್ಲಿ ಸಿದ್ದಾಪುರದಲ್ಲಿ ಸಮುದಾಯ ಭವನ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಇದರಿಂದ ಎಲ್ಲ ಸಮುದಾಯದವರಿಗೂ ಅನುಕೂಲವಾಗಲಿದೆ ಎಂದರು.

ಸಚಿವ ಮಂಕಾಳ ವೈದ್ಯ ಮಾತನಾಡಿ, ಜಗತ್ತಿನಲ್ಲಿಯೇ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಆದಿಚುಂಚನಗಿರಿ ಮಠ ಶಿಕ್ಷಣ ಕ್ರಾಂತಿಗೆ ಕಾರಣವಾಗಿದೆ. ಸರ್ಕಾರದ ಬಳಿಯೂ ಆಗದ ಕೆಲಸವನ್ನು ಇಂದು ಶ್ರೀಮಠ ಮಾಡುವ ಕಾರ್ಯ ಮಾಡುತ್ತಿದೆ. ಪ್ರೀತಿ, ವಿಶ್ವಾಸ, ಶ್ರದ್ಧೆ ಇದ್ದಲ್ಲಿ ಶ್ರೀ ಮಠವೇ ಬಂದು ಎಲ್ಲವನ್ನು ಮಾಡುತ್ತದೆ ಎನ್ನುವುದಕ್ಕೆ ಇಂದು ಹೊನ್ನಾವರದಲ್ಲಾದ ಬದಲಾವಣೆಗಳೇ ಶಾಕ್ಷಿಯಾಗಿದೆ. ಗುರುಗಳ ಆಶಿರ್ವಾದಿಂದಾಗಿ ಶಾಸಕರು ನಾವೆಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅಗತ್ಯವಿರುವ ಕಲ್ಯಾಣ ಮಂಟಪವನ್ನು ಕೂಡ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

300x250 AD

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಖರೆ ಒಕ್ಕಲಿಗರ ಸಮುದಾಯದವರು ಧಾರ್ಮಿಕವಾಗಿ ದೊಡ್ಡ ಮನಸ್ಸಿದ್ದರೂ ಕೂಡ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಷ್ಟೊಂದು ದೊಡ್ಡ ದೇವಸ್ಥಾನ ನಿರ್ಮಾಣ ಹಾಗೂ ಶ್ರೀಗಳ ಪಾದಸ್ಪರ್ಶದಿಂದಾಗಿ ಶ್ರೀ ಕ್ಷೇತ್ರ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಅದೇಷ್ಟೋ ದೇವಸ್ಥಾನಗಳು ಜೀಣೋದ್ಧಾರದ ಸನಿಹಕ್ಕೆ ಬಂದಿದ್ದರು ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಶ್ರೀಗಳ ಆಶಿರ್ವಾದಿಂದಾಗಿ ಕರ್ಜಗಿ ಕ್ಷೇತ್ರದಲ್ಲಿ ಉತ್ತಮ ದೇವಸ್ಥಾನ ಲೋಕಾರ್ಪಣೆಯಾಗಿದೆ. ಸಚಿವರ ಸಹಕಾರದೊಂದಿಗೆ ಸಮುದಾಯಕ್ಕೆ ಬೇಕಾದ ಸಮುದಾಯ ಭವನ ಹಾಗೂ ದೇವಸ್ಥಾನಕ್ಕೆ 10 ಲಕ್ಷ ರೂಗಳನ್ನು ನೀಡುವುದಾಗಿ ಇದೆ ಸಂದರ್ಭದಲ್ಲಿ ತಿಳಿಸಿದರು.

ಇದೇ ವೇಳೆ ಡಾ. ಉಮೇಶ ಭದ್ರಾಪುರ ರಚಿಸಿದ್ದ ‘ಕರ್ನಾಟಕದ ಖರೆ ಒಕ್ಕಲಿಗರು’ ಕೃತಿಯನ್ನು ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಡಾ. ಉಮೇಶ ಭದ್ರಾಪುರ, ಉತ್ತರಕನ್ನಡ ಹಾಗೂ ಶಿವಮೊಗ್ಗದ 11 ತಾಲ್ಲೂಕುಗಳಲ್ಲಿ ಇರುವ ಕರೆ ಒಕ್ಕಲಿಗರ ಬಗ್ಗೆ, ಅವರ ಆಚಾರ ವಿಚಾರ ಮತ್ತು ಆರ್ಥಿಕವಾಗಿ ಹಿಂದುಳಿದು ಒಂದು ರೀತಿ ಬುಡಕಟ್ಟು ಸಮುದಾಯದವರ ರಿತಿ ಬದುಕುತ್ತಿರುವವರ ಬಗ್ಗೆ ಅಧ್ಯಯನ ನಡೆಸಿ ರಚಿಸಲಾಗಿದೆ. ಅಲ್ಲದೆ ಸಮುದಾಯ ಮುನ್ನೆಲೆಗೆ ಬರಲು ಬೇಕಾದ ಪರಿಹಾರೋಪಾಯದ ಬಗ್ಗೆ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ, ಉತ್ತರಕನ್ನಡದ ಉಸ್ತುವಾರಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಅರಣ್ಯ ಅತಿಕ್ರಮಣದಾರರ ಪರ ಹೋರಾಟಗಾರ ರವೀಂದ್ರ ನಾಯ್ಕ, ದೇವಸ್ಥಾನದ ಉಸ್ತುವಾರಿ ಸುರೇಶ ಶೆಟ್, ಉದ್ಯಮಿಗಳಾದ ಉಪೇಂದ್ರ ಪೈ, ಆರ್.ಜಿ ಶೇಟ್, ಗಣಪತಿ ಶೇಟ್, ಕೃಷ್ಣೆ ಗೌಡ, ಸಿದ್ದಾಪುರ ಕರೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ, ಸೀತಾರಾಮ ಗೌಡ, ಸುಧಾಕರ್ ಗೌಡ, ದೇವೇಂದ್ರ ಗೌಡ ವೇದಿಕೆಯಲ್ಲಿದ್ದರು.

Share This
300x250 AD
300x250 AD
300x250 AD
Back to top