Slide
Slide
Slide
previous arrow
next arrow

ಮೂರನೇ ದಿನಕ್ಕೆ ಮುಂದುವರಿದ‌ ಉಪವಾಸ ಸತ್ಯಾಗ್ರಹ : ದೇಶಪಾಂಡೆ ಭೇಟಿ

300x250 AD

ಜೋಯಿಡಾ : ರಾಜ್ಯದ ಕುಣಬಿ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದ ವತಿಯಿಂದ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಕುಣಬಿ ಭವನದ ಆವರಣದಲ್ಲಿ ಆಯೋಜಿಸಿರುವ ಉಪವಾಸ ಸತ್ಯಾಗ್ರಹವು ಬುಧವಾರ ಮೂರನೇ ದಿನಕ್ಕೆ ಮುಂದುವರೆದಿದೆ.

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆ ಮಾತನಾಡಿ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಹಾಗೂ ಬುಡಕಟ್ಟು ಸಂಸ್ಕೃತಿಗೆ ಕುಣಬಿ ಸಮುದಾಯ ನೀಡಿದ ಕೊಡುಗೆ ಅಪಾರ ಮತ್ತು ಮಹತ್ವಪೂರ್ಣವಾಗಿದೆ. ಜೋಯಿಡಾದಂತಹ ತಾಲೂಕಿನಲ್ಲಿ ಇಲ್ಲಿಯ ಪರಿಸರ ಹಾಗೂ ಸಮೃದ್ಧ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಕುಣಬಿಗಳ ಪಾತ್ರ ಬಹುಮುಖ್ಯವಾಗಿದೆ. ಕುಣಬಿ ಸಮುದಾಯದವರು ಪ್ರಕೃತಿಯನ್ನು ಆರಾಧಿಸುವವರು, ದೇವರಂತೆ ಪೂಜಿಸುವವರು. ಹಾಗಾಗಿ ಇಲ್ಲಿಯ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ಕುಣಬಿಗಳ ಕೊಡುಗೆ ಸ್ಮರಣೀಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಕುಣಬಿ ಸಮುದಾಯದವರು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಕುಣಬಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು. ಕುಣಬಿ ಸಮುದಾಯದ ನ್ಯಾಯೋಚಿತವಾದ ಹಾಗೂ ಬದುಕಿನ ಹಕ್ಕಿಗಾಗಿ ನಡೆಸುತ್ತಿರುವ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು.

ಈ ಸಂದರ್ಭದಲ್ಲಿ ಕುಣಬಿ ಸಮಾಜದ ಜಿಲ್ಲಾಧ್ಯಕ್ಷರಾದ ಸುಭಾಷ್ ಗಾವಡಾ, ಕಾರ್ಯದರ್ಶಿ ಚಂದ್ರಶೇಖರ್ ಸಾವರ್ಕರ್ ಸೇರಿದಂತೆ ಕುಣಬಿ ಸಮುದಾಯದ ಮುಖಂಡರು, ಸಮಾಜ ಬಾಂಧವರ ಜೊತೆ ಆರ್.ವಿ.ದೇಶಪಾಂಡೆ ಸಮಾಲೋಚನೆ ನಡೆಸಿದರು.

300x250 AD

ಈ ಸಂದರ್ಭದಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ, ಕೆಪಿಸಿಸಿ ಸದಸ್ಯರಾದ ಸದಾನಂದ ದಬಗಾರ, ಮಾಜಿ ಜಿ.ಪ.ಸ ಸದಸ್ಯ ಸಂಜಯ ಹಣಬರ, ಕಾಂಗ್ರೆಸ್ ಮುಖಂಡರಾದ ದೇವಿದಾಸ ದೇಸಾಯಿ, ಆರೀಶ್ ಖಾದರ್, ತುಷಾರ್ ಸುಂಟನಕರ, ನಂದಿಗದ್ದೆ ಗ್ರಾ.ಪಂ ಅಧ್ಯಕ್ಷ ಅರುಣ್ ದೇಸಾಯಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top