Slide
Slide
Slide
previous arrow
next arrow

ಮಾ.5ಕ್ಕೆ ದೇವಳಮಕ್ಕಿಯ ಶ್ರೀ ದೇವತಿ ದೇವಿಯ ಜನ್ಮೋತ್ಸವ

300x250 AD

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಶ್ರೀ ದೇವತಿ ದೇವಿಯ 14ನೇ ಜನೋತ್ಸವ (ವರ್ಧಂತಿ ಉತ್ಸವ)ಮಾರ್ಚ್ 5, ಮಂಗಳವಾರದಂದು ನಡೆಯಲಿದೆ.

ಬೆಳ್ಳಿಗೆ 10.30 ಘಂಟೆಗೆ ಪ್ರಥಮ ಪೂಜೆ, ಅಲಂಕಾರ ಶ್ರೀ ಕುಂಬಾರ ಖುಟೆಗೆ ಪೂಜೆ ಹಾಗೂ ಮಧ್ಯಾಹ್ನ 12 ರಿಂದ 1 ಗಂಟೆ ತನಕ ಶ್ರೀ ಗ್ರಾಮ ದೇವಿಗೆ ಊಡಿ ತುಂಬುವ ಮತ್ತು ತುಲಾಭಾರ ಕಾರ್ಯಕ್ರಮಗಳು ಜರುಗಲಿದೆ. ನಂತರ ಶ್ರೀ ದೇವಿಯ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಲಿಲಾವು ಆದ ನಂತರ ಆನಂದು ಗೋಪಾಲಕೃಷ್ಣ ನಾಯ್ಕ ದೇವಳಮಕ್ಕಿ ಇವರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಮಹಾಪೂಜೆ ಆದ ನಂತರ ಜನ್ಮೋತ್ಸವದ ಪ್ರಯುಕ್ತ ರಾತ್ರಿ 10.30 ಶ್ರೀ ಮಹಾದೇವ ನವ ನಾಟ್ಯ ಮಂಡಳಿ ದೇವಳಮಕ್ಕಿಯವರಿಂದ ಇವರು ಆರ್ಪಿಸುವ ಹಾಗೂ ಪ್ರದೀಪ್ ಕೊಠಾರಕರ, ಕಿನ್ನರ ಇವರ ವಿರಚಿತ ಸುಂದರ ಸಾಮಾಜಿಕ ಹಾಸ್ಯಮಯ “ಮಂಗಳಸೂತ್ರ ಹೆ ಪವಿತ್ರ ಘಡತಾ ಸಗಳೆ ವಿಚಿತ್ರ” ಎಂಬ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಶ್ರೀ ದೇವಿಯ ಜನೋತ್ಸವಕ್ಕೆ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ಹಾಗೂ ನಾಟ್ಯ ಪ್ರೇಕ್ಷಕರು ಸಹ ಬಂದು ಪ್ರೋತ್ಸಾಹಿಸಬೇಕೆಂದು ಶ್ರೀ ದೇವತಿ ದೇವಿಯ ದೇವಸ್ಥಾನ ಕಮಿಟಿಯವರು ಹಾಗೂ ಊರ ನಾಗರಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top