Slide
Slide
Slide
previous arrow
next arrow

ಕ್ರೀಡೆ ಮಾನವನ ಏಕತೆಯ ಪ್ರತೀಕ: ರವೀಂದ್ರ ನಾಯ್ಕ

300x250 AD

ಭಟ್ಕಳ: ಕ್ರೀಡೆ ಮಾನವನ ವಿಕಸನದೊಂದಿಗೆ, ಏಕತೆಯ ಪ್ರತೀಕವಾಗಿದೆ. ಇಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

 ಅವರು ಭಟ್ಕಳ ತಾಲೂಕಿನ ಕೆಕ್ಕೋಡನಲ್ಲಿ ಇತ್ತೀಚೆಗೆ ಶ್ರೀ ಜೈನ್ ಕುದುರೆ ಬೀರಪ್ಪ ಮರಾಠಿ ಯುವಕ ಮಂಡಲ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಂಬ್ರಿ ಮರಾಠಿ ಸಮಾಜದ ಕಬ್ಬಡ್ಡಿ ಪಂದ್ಯಾಟದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಯುವ ಜನಾಂಗವು ದುಶ್ಚಟಕ್ಕೆ ಬಲಿಯಾಗದೇ, ಸಾಮಾಜಿಕ ಜಾಗೃತೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಜಾತಿ, ಮತ ಮತ್ತು ಧರ್ಮ ಮೀರಿದ್ದು ಇರುತ್ತದೆ ಎಂದು ತಿಳಿಸಿದರು.

300x250 AD

 ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ ಮಾತನಾಡುತ್ತಾ, ಕುಂಬ್ರಿ ಮರಾಠಿ ಸಮಾಜವು ಮುಂದಿನ ದಿನಗಳಲ್ಲಿ ರಾಜಕೀಯ ಮೀಸಲಾತಿ ಮತ್ತು ಬುಡಕಟ್ಟು ಪಂಗಡಕ್ಕೆ ಸೇರಿಸುವಂತೆ ಹೋರಾಟ ಮುಂದುವರೆಸಲಾಗುವುದು ಎಂದರು.

 ವೇದಿಕೆಯ ಮೇಲೆ ಯುವಕ ಮಂಡಲದ ಅಧ್ಯಕ್ಷ ಶ್ರೀಧರ ನಾಗರಾಜ ಮರಾಠಿ, ಕಾರ್ಯಾಧ್ಯಕ್ಷ ಈಶ್ವರ ಮಾರು ಮರಾಠಿ, ಚನ್ನಯ್ಯ ತಿಮ್ಮ ಮರಾಠಿ, ಕೃಷ್ಣ ದೇವು ಮರಾಠಿ, ವಾಸು ಮಾದೇವ ಮರಾಠಿ, ಉದಯ ಶೇಷ ಮರಾಠಿ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top