ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಿತ್ತೂರು ಮತ್ತು ಖಾನಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇರುವುದಲ್ಲದೇ, ಲೋಕಸಬಾ ಚುನಾವಣೆ ಫಲಿತಾಂಶದಲ್ಲಿ ಕಿತ್ತೂರು ಮತ್ತು ಖಾನಾಪುರ ಮತದಾರರು ನಿರ್ಣಾಯಕರಾಗಲಿದ್ದಾರೆಂದು ಕಿತ್ತೂರು ಕ್ಷೇತ್ರದ ಶಾಸಕ ಬಾಬಾ ಸಾಹೇಬ ಪಾಟೇಲ್ ಹಾಗೂ ಹಿಂದಿನ ಖಾನಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಂಜಲಿ ಲಿಂಬಾಳಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಎಲ್‌ಎ ನೇಮಕಾತಿ ಸಂಚಾಲಕ ರವೀಂದ್ರ ನಾಯ್ಕ ತಿಳಿಸಿದರು.
ಕೆನರಾ ಲೋಕಸಭಾ ಕ್ಷೇತ್ರದ ಬೂತ್ ಲೆವೆಲ್ ಏಜೆಂಟ್ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕೆನರಾ ಲೋಕಸಭಾ ಕ್ಷೇತ್ರದ ಸಂಚಾಲಕ ರವೀಂದ್ರ ನಾಯ್ಕ ಮಾ.1 ರಂದು ಕಿತ್ತೂರು ಮತ್ತು ಖಾನಾಪುರ ವಿಧಾನ ಸಭಾ ಕ್ಷೇತ್ರದ ಲೋಕಸಭೆ ಸಮಾಲೋಚನೆ ಸಂದರ್ಭದಲ್ಲಿ ಹೇಳಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಬಿಎಲ್‌ಎ ಏಜೆಂಟರ ಪಾತ್ರ ಮಹತ್ವದಾಗಿದ್ದು ಪೂರ್ಣ ಪ್ರಮಾಣದ ಪರಿಜ್ಞಾನವನ್ನು ನೀಡುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದರು.
ಕಿತ್ತೂರು ನಗರ ಬ್ಲಾಕ್ ಅಧ್ಯಕ್ಷ ಸಂಗನ ಗೌಡ ಪಾಟೀಲ್, ನೆಸರ್ಗಿ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಖಾನಾಪುರ ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಮಾದೇವ ಕೋಳಿ, ಗ್ರಾಮೀಣ ಅಧ್ಯಕ್ಷ ಮಧುಕರ್ ಕವಲೆಕರ್, ಸುನೀಲ್ ಅವಾರಿ, ಉಮೇಶ ಹುಂಬಿ, ಬಾಬಾಜಾನ್ ಬೆಳವಡಿ, ಚೆನ್ನಗೌಡ ಪಾಟೀಲ್, ಶಿವಯೋಗಿ ದೊಡ್ಮನಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ರವೀಂದ್ರ ನಾಯ್ಕ ಪ್ರಶಂಸೆ:
ಬೂತ್ ಲೆವೆಲ್ ಏಜೆಂಟ್ ನೇಮಕಾತಿಯಲ್ಲಿ ಕಿತ್ತೂರು-230 ಹಾಗೂ ಖಾನಾಪುರ ವಿಧಾನ ಸಭಾ ಕ್ಷೇತ್ರದ 312 ಬೂತ್ ಲೆವೆಲ್ ಏಜೆಂಟ್ ನೇಮಕಾತಿ ಪೂರ್ಣಗೊಂಡಿದ್ದು, ನೇಮಕಾತಿಯಲ್ಲಿ ಶೇ.100 ರಷ್ಟು ಸಾಧನೆ ಆಗಿದೆಯೆಂದು ಬಿಎಲ್‌ಎ ನೇಮಕಾತಿ ಸಂಚಾಲಕ ರವೀಂದ್ರ ನಾಯ್ಕ ಪ್ರಶಂಸೆ ವ್ಯಕ್ತಪಡಿಸಿದರು.