Slide
Slide
Slide
previous arrow
next arrow

ಟೊಂಕಾ ಕಡಲತೀರದಲ್ಲಿ ಡಾಲ್ಪಿನ್ ಸಾವು

300x250 AD

ಹೊನ್ನಾವರ: ವಿಶ್ವ ವನ್ಯಜೀವಿ ದಿನದಂದು ಕಾಸರಕೋಡ ಟೊಂಕಾದ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ವನ್ಯಜೀವಿ ಡಾಲ್ಪಿನ್ ಪ್ರಾಣ ಕಳೆದುಕೊಂಡಿದೆ. ಹೊನ್ನಾವರ ಅರಣ್ಯ ವಿಭಾಗದ ಪಾರೆಸ್ಟ್ ವರ್ಕಿಂಗ್ ಪ್ಲಾನ್ ವರದಿ ಸಲ್ಲಿಸುವಾಗ ಸದರಿ ಡಾಲ್ವಿನ್ ಫೋಟೋ ಸೆರೆ ಹಿಡಿಯಲಾಗಿತ್ತು.

ಕಳೆದ ವರ್ಷ ಟೊಂಕಾ ಸಮುದ್ರದ ತೀರದಲ್ಲಿ ಅನೇಕ ಕಡಲಾಮೆಗಳು, ತಿಮಿಂಗಿಲ, ಡಾಲ್ಫಿನ್ ಗಳ ಮೃತ ದೇಹಗಳು ಸಿಕ್ಕಿದ್ದವು. 50 ಹೆಚ್ಚು ಆಮೆಗೂಡುಗಳು ಈ ವರ್ಷ ಹುಡುಕಿದ್ದಾರೆ. ಡಿಸೆಂಬರದಿಂದ ಕಡಲಾಮೆ ಮೊಟ್ಟೆ ಇಡುವದು ಎಪ್ರಿಲ್ ತಿಂಗಳ ತನಕ ಇರುತ್ತದೆ. ಇಂತಹ ಪ್ರದೇಶದಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಈ ವರೆಗೂ ಸ್ಥಳ ಸಂದರ್ಶಿಸಿಲ್ಲ. ಟೊಂಕಾದ ಸಮುದ್ರ ವನ್ಯ ಜೀವಿಗಳನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ನಿರ್ಲಕ್ಷಿಸುತ್ತಿದೆ ಅವುಗಳ ಬಗ್ಗೆ ಎಳ್ಳಿನಷ್ಟು ದಯೆಯನ್ನು ತೋರಿಸುತ್ತಿಲ್ಲ ಎಂದು ಪ್ರಮುಖರಾದ ರಾಜೇಶ ತಾಂಡೇಲ ಆರೋಪಿಸಿದ್ದಾರೆ.

300x250 AD

ಟೊಂಕಾ ಕಡಲತೀರದಲ್ಲಿ ಕರ್ನಾಟಕ ವನ್ಯ ಜೀವಿ ವಿಭಾಗವು  ಶಾಶ್ವತವಾದ ವೀಕ್ಷಣಾ ವ್ಯವಸ್ತೆಯನ್ನು ಸಿಸಿ ಕ್ಯಾಮರಾ ಸಹಿತ ಮಾಡಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top