Slide
Slide
Slide
previous arrow
next arrow

ದಿ.ಬಾಲಚಂದ್ರ ನಾಯಕ ಮನೆಗೆ ಶಾಸಕ ಸತೀಶ್ ಸೈಲ್ ಭೇಟಿ: ಸಾಂತ್ವನ

300x250 AD

ಅಂಕೋಲಾ: ಗುತ್ತಿಗೆದಾರ ಸಂಘದ ಮಾಜಿ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಅಗಸೂರಿನ ಬಾಲಚಂದ್ರ ನಾಯಕರವರ ಮನೆಗೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ವಿವಿಧ ಇಲಾಖೆಗಳಿಂದ ಬರಬೇಕಿದ್ದ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜೊತೆಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ದೊರೆಯುವಂತೆ ಮಾಡುವುದಾಗಿ ತಿಳಿಸಿದರು. ಬಾಲಚಂದ್ರ ನಾಯಕರವರ ಪತ್ನಿ, ಮಗಳು, ಮಗ ಮತ್ತು ಕುಟುಂಬಸ್ಥರನ್ನು ಭೇಟಿಯಾಗಿ ಸಂತೈಸಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂಘದವರಾದ ಮಾಧವ ನಾಯ್ಕ, ಉಪೇಂದ್ರ ನಾಯ್ಕ, ಮೂರ್ಕುಂಡಿ ನಾಯ್ಕ, ಗೋಪು ನಾಯಕ ಅಡ್ಲುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top