ಕುಮಟಾ: ನಿನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಹಿಂಬಾಲಕರು ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದ್ದು ರಾಜ್ಯಸರ್ಕಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಮ್ಮ ವೈರಿದೇಶದ ಪರವಾಗಿ ಘೋಷಣೆ ಕೂಗಿದ ನೀಚ ಮನಸ್ಥಿತಿಯವರನ್ನು ಕೂಡಲೇ ಬಂಧಿಸಬೇಕು.ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದು ಸಂಸ್ಥಾಪಕ ಅಧ್ಯಕ್ಷ ಎಂ.ಜಿ.ಭಟ್ ಆಗ್ರಹಿಸಿದರು.
ನಮ್ಮ ದೇಶದ ನೀರು ಗಾಳಿ ಅನ್ನವನ್ನು ನಮ್ಮ ದೇಶದ ವೈರಿದೇಶವಾದ ಪಾಕಿಸ್ತಾನಕ್ಕೆ ನಮ್ಮ ನೆಲದಲ್ಲಿಯೇ ನಿಂತು ಜಿಂದಾಬಾದ್ ಎಂದು ಕೂಗುವುದನ್ನು ದೇಶದ್ರೋಹದ ಕೆಲಸ ಎಂದು ಪರಿಗಣಿಸಿ ಅವರ ವಿರುದ್ಧ ತಕ್ಷಣ ಕೇಸ್ ದಾಖಲಿಸಿ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದುವರೆಗೂ ತಪ್ಪಿತಸ್ಥರನ್ನು ಬಂಧಿಸದೆ ಇರುವುದು ಸರ್ಕಾರ ಶಾಮೀಲು ಇದ್ದಂತೆ ಕಾಣುತ್ತದೆ ಎಂದು ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್ ಹೇಳಿದರು .
ಇಂತಹ ದೇಶ ದ್ರೋಹದ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದಲ್ಲಿ ಸಮಾಜಕ್ಕೆ ಮಾರಕವಾಗಲಿದೆ. ಯಾವುದೇ ಭಾರತೀಯನೂ ಕೂಡ ಇಂಥ ದೇಶದ್ರೋಹದ ಹೇಳಿಕೆಯನ್ನ ಸಹಿಸಲು ಸಾಧ್ಯವೇ ಇಲ್ಲ. ನಮ್ಮ ತಾಯ್ನಾಡಿಗಾಗಿ ಯಾವ ತ್ಯಾಗಕ್ಕೂ ಸಿದ್ಧವಿರುವ ಪ್ರಜೆಗಳನ್ನು ಹೊಂದಿರುವ ದೇಶ ನಮ್ಮದು. ಆದರೆ ನಾವು ಸುಮ್ಮನಿದ್ದೆವೆಂದರೆ ಅದು ನಮ್ಮ ಹೇಡಿತನವಲ್ಲ. ನಮ್ಮ ತಾಳ್ಮೆಯನ್ನ ಕೆಣಕಿ ನಮ್ಮ ದೇಶದ ವಿರುದ್ಧ ಈ ರೀತಿಯಾದ ಪಾಕಿಸ್ತಾನ ಜಿಂದಾಬಾದ್ ಕೂಗನ್ನ ನಮ್ಮ ಶಕ್ತಿ ಕೇಂದ್ರದಲ್ಲಿ ಕೂಗುವುದಾದಲ್ಲಿ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಆದ್ದರಿಂದ ಸಮಸ್ತ ದೇಶಪ್ರೇಮಿಗಳ ಪರವಾಗಿ ಜನಪರ ಹೋರಾಟ ವೇದಿಕೆಯ ಆಗ್ರಹ ಎಂದರೆ ಕೂಡಲೇ ಅವರನ್ನು ಬಂಧಿಸಿ ಶಿಕ್ಷಿಸಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟಕ್ಕೆ ನಾವೆಲ್ಲ ಅಣಿಯಾಗುತ್ತೇವೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.ಎಂದು ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಶಾಸಕರಾದ ದಿನಕರ ಶೆಟ್ಟಿ, ರಾಮದಾಸ್ ಗುನಗಿ, ಆರ್.ಎನ್. ಹೆಗಡೆ, ಆದಿತ್ಯ ಶೇಟ್ ,ಗಜು ಪೈ,ಪ್ರಜ್ವಲ್ ನಾಯಕ್, ಎಂ.ಎನ್. ಭಟ್, ಕಾರ್ತಿಕ್ ಭಟ್, ಸುರೇಶ್ ಹರಿಕಾಂತ್, ಚಿದಾನಂದ ಲಕ್ಕು ಮನೆ, ಗೋಪಾಲ್ ಶೆಟ್ಟಿ ಗೋಪಾಲ ಶೆಟ್ಟಿ,ಶ್ರೀಮತಿ ಜಯ ಶೇಟ್,ಭಾಸ್ಕರ್ ಹರಿಕಂತ್ ,ರಿತೇಶ್, ತುಳಸು ಗೌಡ್, ಸಣ್ಣ ಗೌಡ್,ಉದಯ್ ಭಟ್,ಮೋಹನ್ ಮುದಂಗಿ,ರಾಮಚಂದ್ರ ,ಮಂಜು,ಈಶ್ವರ್,ನಾಗೇಶ್ ಮಹಾಂತೇಶ್,ಹಾಗೂ ಇತರರು ಇದ್ದರು.