ಜೊಯಿಡಾ: ಕರ್ನಾಟಕ ಸರ್ಕಾರದ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಕಾರ್ಯಕ್ರಮಕ್ಕೆ ಜೋಯಿಡಾದ ಶ್ರೀರಾಮ ಪ್ರೌಢಶಾಲೆಯಲ್ಲಿ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಜೋಯಿಡಾ ತಹಶೀಲ್ದಾರ್ ಮಂಜುನಾಥ್ ಮುನ್ನಳ್ಳಿಯವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಗಿ ಇದು ನೈಸರ್ಗಿಕ ಆಹಾರ. ಇದು ಪೌಷ್ಟಿಕ ಆಹಾರವೂ ಆಗಿದೆ. ಸರ್ಕಾರದ ಹಲವು ಪ್ರಮುಖ ಯೊಜನೆಗಳಲ್ಲಿ ಇದು ಒಂದಾಗಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂದೀಪ್ ನಾಯ್ಕ ಉಪಾಧ್ಯಕ್ಷೆ ಮಿನಾಕ್ಷಿ ಗಾವಡಾ, ಸದಸ್ಯೆ ಲಲಿತಾ, ಗುಲಾಬಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಆರ್.ಪಿ. ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮ್ಮದ್ ಶೇಖ ಸ್ವಾಗತಿಸಿದರು. ಶ್ರೀ.ರಾಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಆರ್.ಆರ್, ನಾಯಕ ವಂದಿಸಿದರು. ಶಿಕ್ಷಕಿ ಎಚ್.ಜಿ.ಕಾಮತ್ ನಿರೂಪಿಸಿದರು.