Slide
Slide
Slide
previous arrow
next arrow

‘ಶಿಕ್ಷಣವಂತ ಮಕ್ಕಳಿಂದ ಸಶಕ್ತ ಸಮಾಜ ನಿರ್ಮಾಣ ಸಾಧ್ಯ’

300x250 AD

ಮುಂಡಗೋಡ: ಸಮಾಜದಲ್ಲಿ ಮಕ್ಕಳಲ್ಲಿ ಜಾತಿ, ಲಿಂಗ ಹಾಗೂ ಧರ್ಮ ಆಧಾರಿತವಾಗಿ ಬೇದಭಾವ ಮಾಡದೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಹೇಳಿದರು

ಪಟ್ಟಣದ ಲೋಯೊಲಾ ವಿಕಾಸ ಕೇಂದ್ರ ಸಭಾಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಾರವಾರ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಯಾವಾಗ ಪ್ರತಿಯೊಬ್ಬ ಮಗುವು ಶಿಕ್ಷಣ ಕಲಿಯತ್ತೊ ಅಂದು ಸಶಕ್ತ ಸಮಾಜ ನಿರ್ಮಾಣವಾಗುವುದು.ತಾಯಂದಿರೆ ಮೊದಲು ಮಕ್ಕಳಿಗೆ ದಾರಿ ದೀಪವಾಗಿ ಸಮಾಜದ ಒಳ್ಳೆಯ ಹಾಗೂ ಕೆಟ್ಟದರ ಬಗ್ಗೆ ತಿಳುವಳಿಕೆ ನೀಡಬೇಕೆಂದು ಹೇಳಿದರು.

ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ರೂಪಾ ಅಂಗಡಿ ಮಾತನಾಡಿ, ಸಮಾಜದಲ್ಲಿ ಲಿಂಗ ತಾರತಮ್ಮವನ್ನು ತಡೆಗಟ್ಟಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಖಾತ್ರಿಪಡಿಸಿ ಅವರಿಗೆ ರಕ್ಷಣೆ ಕೊಡುವುದು ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಎಲ್ಲ ಇಲಾಖೆಯವರು ಕೂಡಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಪೋಕ್ಸೋ ಕಾಯ್ದೆ, ಮಕ್ಕಳ ಸಾಗಾಣಿಕೆ ಹಾಗೂ ಬಾಲ್ಯವಿವಾಹವನ್ನು ಸಮಾಜದಲ್ಲಿ ತಡೆಗಟ್ಟಲು ಸಹಕಾರಿಯಾಗುವುದಾಗಿ ಹೇಳಿದರು.

300x250 AD

ಈ ವೇಳೆ ಸಮನ್ವಯ ಅಧಿಕಾರಿ ಜೆ.ಎನ್. ನಾಯ್ಕ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶಟ್ಟಿ, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top