Slide
Slide
Slide
previous arrow
next arrow

ಮಾ.3ಕ್ಕೆ ‘ಮನೆ‌ಮದ್ದು ಮಾಹಿತಿ ಕಾರ್ಯಾಗಾರ’

300x250 AD

ಶಿರಸಿ: ಇಲ್ಲಿನ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿ ಶಿರಸಿ ಮತ್ತು ಪಾರಂಪರಿಕ ವೈದ್ಯ ಪರಿಷತ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ.3, ರವಿವಾರ ಮಧ್ಯಾಹ್ನ 3ರಿಂದ ಗಿಡಮೂಲಿಕೆ ಪರಿಚಯ, ಉಚಿತ ಚಿಕಿತ್ಸಾ ಸಲಹೆ ಹಾಗೂ ವನಸ್ಪದಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ.

ಅಧ್ಯಕ್ಷತೆಯನ್ನು ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷರಾದ ಎಸ್.ಎಮ್.ಹೆಗಡೆ ಮಕ್ಕಳತಾಯಿಮನೆ ವಹಿಸಲಿದ್ದು, ಖ್ಯಾತ ಪಾರಂಪರಿಕ ವೈದ್ಯೆ ಸುಮನಾ ಮಳಲಗದ್ದೆ ಸಮಾರಂಭವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಂಜುನಾಥ ಹೆಗಡೆ ಹೂಡ್ಲಮನೆ, ರಾಮಚಂದ್ರ ಭಟ್ ದೇವಗೊಡ್ಳು ತಾಲೂಕಾ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷರಾದ ರಾಮಚಂದ್ರ ಹೆಗಡೆ ತಾರೇಹಳ್ಳಿ, ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕ ಎಸ್.ಎಸ್. ಭಟ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳ ಆರೋಗ್ಯ ಸಮಸ್ಯೆ, ಪರಿಹಾರ, ರೋಗಗಳ ಕುರಿತು ಮಾಹಿತಿ , ವಿಚಾರ-ವಿನಿಮಯ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ದಾಕ್ಷಾಯಿಣಿ ಪಿ.ಸಿ. (Tel:+919538918895) ಇವರನ್ನು ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top