Slide
Slide
Slide
previous arrow
next arrow

ನಾಮಧಾರಿ ಪ್ರೀಮಿಯರ್ ಲೀಗ್: ಬೆಳಕೆ ಫ್ರೆಂಡ್ಸ್ ಚಾಂಪಿಯನ್

300x250 AD

ಭಟ್ಕಳ: ಇಲ್ಲಿನ ತಟ್ಟಿಹಕ್ಕಲ್ ಗ್ರೀನ್ ಪಾರ್ಕಿನಲ್ಲಿ ನಡೆದ ನಾಮಧಾರಿ ಪ್ರೀಮಿಯರ್ ಲೀಗ್-2024 ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಕೆ  ಫ್ರೆಂಡ್ಸ್ ಚಾಂಪಿಯನ್ ಪಟ್ಟಕ್ಕೇರಿತು.

ಪೈನಲ್ ಪಂದ್ಯದಲ್ಲಿ  ಬೆಳಕೆ ಫ್ರೆಂಡ್ಸ್ ತಂಡವು ಮುರುಡೇಶ್ವರದ ಸಾನಿಕಾ ಫ್ರೆಂಡ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ  ನಾಮಧಾರಿ ಟ್ರೋಪಿ ಹಾಗೂ 50 ಸಾವಿರ ನಗದು ಬಹುಮಾನವನ್ನು ಪಡೆಯಿತು. ಮುರುಡೇಶ್ವರದ ಸಾನಿಕಾ ಫ್ರೆಂಡ್ಸ್ 30 ಸಾವಿರ ನಗದು ಹಾಗೂ ಟ್ರೋಪಿಯನ್ನು ಪಡೆಯಿತು.

ಫ್ರೆಂಡ್ಸ್ ಬೆಳಕೆ ತಂಡದ ಅರುಣ್ ನಾಯ್ಕ  ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು. ಉತ್ತಮ  ಬ್ಯಾಂಟಿಂಗ್ ಪ್ರಶಸ್ತಿಯನ್ನು ಸಿದ್ದಾರ್ಥ ನಾಯ್ಕ ಪಡೆದರು. ಉತ್ತಮ ಬೌಲಿಂಗ್ ಪ್ರಶಸ್ತಿಯನ್ನು ನಾಗೇಶ ನಾಯ್ಕ ಪಡೆದರು.

300x250 AD

ಬಹುಮಾನ ವಿತರಣ ಸಮಾರಂಭದಲ್ಲಿ ಮೊದಲ ಬಹುಮಾನದ ಪ್ರಾಯೋಜಕರಾದ ಎ.ಪಿ.ಎಂ ಸಿ. ಅಧ್ಯಕ್ಷ ಗೋಪಾಲ ನಾಯ್ಕ, ಹಳೆಕೋಟೆ ಹನುಮಮತ ದೇವಸ್ಥಾನದ ಸದಸ್ಯ ಆರ್.ಕೆ. ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಬೆಳಕೆ ಸೊಸೈಟಿ ಅಧ್ಯಕ್ಷ ಮಾದೇವ ನಾಯ್ಕ, ಭಟ್ಕಳ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಕೃಷ್ಣ ಪ್ರಥ್ವಿ, ರಾಘವೇಂದ್ರ ನಾಯ್ಕ, ಭವಾನಿಶಂಕರ ನಾಯ್ಕ,  ಶ್ರೀಕಾಂತ ನಾಯ್ಕ, ವಿನಾಯಕ ನಾಯ್ಕ, ಗಂಗಾಧರ ನಾಯ್ಕ,  ಮಹೇಶ ನಾಯ್ಕ, ಮನಮೋಹನ ನಾಯ್ಕ, ಶಿವಾನಂದ ನಾಯ್ಕ, ಭಾಸ್ಕರ ನಾಯ್ಕ, ಸಂದೀಪ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top