Slide
Slide
Slide
previous arrow
next arrow

ಸಮರ್ಥ ಶ್ರೀಧರ ಕುಟೀರ ಲೋಕಾರ್ಪಣೆ: ಯಕ್ಷಗಾನ ಪ್ರದರ್ಶನ

300x250 AD

ಸಿದ್ದಾಪುರ: ತಾಲೂಕಿನ ವಾಜಗೋಡು ಗ್ರಾಪಂ ವ್ಯಾಪ್ತಿಯ ಶಿಬಳಮನೆಯಲ್ಲಿ ನೂತನವಾಗಿ ಕಟ್ಟಿಸಿರುವ ಶ್ರೀ ಸಮರ್ಥ ಶ್ರೀಧರ ಕುಟೀರದ ಲೋಕಾರ್ಪಣೆ ಹಾಗೂ ಶ್ರೀ ಆಂಜನೇಯ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ವಿವಿಧ ಧಾರ್ಮಿಕ ಹಾಗೂ ಯಕ್ಷಗಾನ  ಕಾರ್ಯಕ್ರಮ ಶ್ರೀ ಸಮರ್ಥ ಶ್ರೀಧರಾಶ್ರಮ ಶ್ರೀ ಸದ್ಗುರು ಪೀಠಂ ಮಹಾಸಂಸ್ಥಾನ ಶ್ರೀ ಸಮರ್ಥ ಶ್ರೀಧರಾಶ್ರಮ ಟ್ರಸ್ಟ್ ಇದರ ಸಂಸ್ಥಾಪಕ ಅಧ್ಯಕ್ಷರಾದ ಕುಂಡಲಿನೀ ಜ್ಞಾನಯೋಗಿ ಶ್ರೀಮದಾತ್ಮಾನಂದ ಸರಸ್ವತೀ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ  ನಡೆಯಿತು.

ಪ್ರಸಿದ್ದ ಕಲಾವಿದರಿಂದ ಪ್ರದರ್ಶನಗೊಂಡ ಮಾರುತಿ ಪ್ರತಾಪ ಯಕ್ಷಗಾನದ ಹಿಮ್ಮೇಳದಲ್ಲಿ  ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ದ ಹೆಗಡೆ ವರ್ಗಾಸರ, ಗಜಾನನ ಭಂಡಾರಿ ಸಹಕರಿಸಿದರು. ಮುಮ್ಮೇಳದಲ್ಲಿ ಗಣಪತಿ ಹೆಗಡೆ ತೋಟಿಮನೆ,ಸಂಜಯ ಬಿಳಿಯೂರು, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಹೆಗಡೆ ಚಪ್ಪರಮನೆ,  ಪ್ರಣವ ಭಟ್ಟ ಶಿರಳಗಿ, ವಾಸುದೇವ ಮಡಿವಾಳ, ಅವಿನಾಶ ಕೊಪ್ಪ ಇತರರು ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.

300x250 AD
Share This
300x250 AD
300x250 AD
300x250 AD
Back to top