Slide
Slide
Slide
previous arrow
next arrow

ಗುತ್ತಿಗೆದಾರ ಬಾಲಚಂದ್ರ ನಾಯಕ ನಿಧನ: ಸಂತಾಪ

300x250 AD

ಅಂಕೋಲಾ: ತಾಲೂಕಿನ ಅಗಸೂರು ನಿವಾಸಿ  ಬಾಲಚಂದ್ರ ರಾಮಚಂದ್ರ ನಾಯಕ (52) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದರು. ತಾಲೂಕಿನ ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಹಾಲಿ ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದರು. ಗ್ರಾಪಂ ಅಗಸೂರಿನ ಮಾಜಿ ಅಧ್ಯಕ್ಷರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಜನಪರವಾದ ಕಾರ್ಯದ ಮೂಲಕ ಮತ್ತು ಮಾನವೀಯತೆ ಯ ಮೂಲಕ ಜನ ಮನ್ನಣೆ ಗಳಿಸಿದ್ದರು.

ಗುತ್ತಿಗೆ ಕೆಲಸದಲ್ಲಿ ನೈಪುಣ್ಯತೆ ಹೊಂದಿರುವ ಇವರು ಹಲವು ಸ್ಥಳಗಳಲ್ಲಿ ತಮ್ಮ ಕರ್ತವ್ಯದ ಮೂಲಕ ಹೆಸರು ಗಳಿಸಿದ್ದರು.ಬಿಎ, ಬಿಎಡ್ ಪದವೀಧರರಾದ ಬಾಬು ನಾಯಕ  ಕಳೆದ ಸಾಲಿನಲ್ಲಿ ಅಗಸೂರಿನಲ್ಲಿ ತನ್ನ ಜೊತೆ  ಬಿಎಡ್ ಕಲಿತ ಸರ್ವರನ್ನು ಕರೆದು ಅಗಸೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ  ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನ  ಸಮಾರಂಭ ಏರ್ಪಡಿಸಿದ್ದರು. ಎಲ್ಲರನ್ನು ಪ್ರೀತಿಯಿಂದ ಕಾಣುವ ಇವರು  ಪತ್ನಿ,  2 ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.  ಕುಟುಂಬದಲ್ಲಿ ದುಃಖ ಮಾಡುಗಟ್ಟಿದೆ.

300x250 AD

ಸಂತಾಪ:
ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್,  ಮಯೂರ ನಾಯಕ, ಸಾಯಿ ಗಾಂವಕರ,  ನ್ಯಾಯವಾದಿ ನಾಗರಾಜ ನಾಯಕ,  ಮಾಧವ ನಾಯಕ,   ಗೋಪಾಲಕೃಷ್ಣ ನಾಯಕ,  ಪ್ರದೀಪ ನಾಯಕ ವಾಸರೆ,ಗೋಪು ನಾಯಕ ಅಡ್ಲುರ್, ರಾಮಚಂದ್ರ ನಾಯ್ಕ್ ಅಗಸೂರು, ಸುಜಾತಾ ಗಾಂವಕರ ,ಸುರೇಶ ನಾಯಕ ಅಲಗೇರಿ, ಸೇರಿದಂತೆ ಸಹಸ್ರಾರು ಗಣ್ಯರು ಆಗಮಿಸಿ ನಿಧನಕ್ಕೆ  ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top