Slide
Slide
Slide
previous arrow
next arrow

ಭೂ ಸುಧಾರಣೆ ಕಾಯಿದೆಗೆ 50 ವರ್ಷ: ಮಾ.1ಕ್ಕೆ ಸುವರ್ಣ ಮಹೋತ್ಸವ

300x250 AD

ಸಿದ್ದಾಪುರ : ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದು 50 ವರ್ಷ ಪೂರೈಸಿದ ಹಿನ್ನಲೆ ಮಾರ್ಚ್ 1 ರಂದು ಪಟ್ಟಣದ ಬಾಲ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಸುವರ್ಣ ಮಹೋತ್ಸವ ಆಚರಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ರೈತ ಮುಖಂಡ ವೀರಭದ್ರ ನಾಯ್ಕ್ ತಿಳಿಸಿದರು.

ಅವರು ಮಂಗಳವಾರ ಪಟ್ಟಣದಲ್ಲಿ ಈ ಕುರಿತು ಮಾಹಿತಿ ನೀಡಿದರು. ಕಾರಣರಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು, ಎಚ್ ಗಣಪತಪ್ಪ ಹೊಸೂರ್ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭೂ ಸುಧಾರಣೆ ಕಾಯ್ದೆ ಮಾಹಿತಿ ನೀಡಲು ತಿ.ನ.ಶ್ರೀನಿವಾಸ್, ನಾಗೇಶ್ ನಾಯ್ಕ್ ಕಾಗಲ್,ಸಿದ್ದಾಪುರದ ಎಂ.ಬಿ.ನಾಯ್ಕ್, ಆರ್.ಕೆ ಹೊನ್ನೆಗುಂಡಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಪ್ರಮುಖರಾದ ರೇವಣ್ಣ ಶಿರಳಗಿ, ಗೋವಿಂದ ಗೌಡ, ವಿನಾಯಕ ಹಲಸಿನಮನೆ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top