Slide
Slide
Slide
previous arrow
next arrow

ದಿನಸಿ ಅಂಗಡಿ ಕಳ್ಳತನ: ಪ್ರಕರಣ ದಾಖಲು

300x250 AD

ಬನವಾಸಿ: ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಬಾಗಿಲು ಮುರಿದ ಕಳ್ಳರು, ಹಣ ಹಾಗೂ ಎಟಿಎಂ ಕಾರ್ಡ್ ಕದ್ದ ಘಟನೆ ಬನವಾಸಿಯಲ್ಲಿ ಇತ್ತೀಚೆಗೆ ನಡೆದಿದೆ.

ಇಲ್ಲಿಯ ಜನತಾ ಕಾಲೋನಿಯ ಕಿರಣ ಶೇಟ್ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯ ಕಪಾಟಿನಲ್ಲಿದ್ದ 17 ಸಾವಿರ ರೂ. ಹಾಗೂ ಎಟಿಎಂ ಕಾರ್ಡ್, ಹಾಗೂ ಅಂಗಡಿಯಲ್ಲಿದ್ದ 4 ಕೆಜಿ ಚಾಲಿ ಅಡಿಕೆಯನ್ನೂ ಕಳ್ಳರು ಕದ್ದಿದ್ದರು. ಎಟಿಎಂ ಕಾರ್ಡ್ ಮೇಲೇ ಪಿನ್ ನಂಬರ್ ಬರೆದಿಟ್ಟುಕೊಂಡಿದ್ದು, ಅವರ ಮೊಬೈಲ್‌ಗೆ ಫೆ.24 ರಂದು 16 ಸಾವಿರ ರೂ. ಬ್ಯಾಂಕ್ ಖಾತೆಯಿಂದ ಡ್ರಾ ಆದ ಸಂದೇಶ ಬಂದಿದ್ದು, ಈ ಕುರಿತಂತೆ ಸೋಮವಾರ ಸಂಜೆ ಬನವಾಸಿ ಠಾಣೆಗೆ ಆಗಮಿಸಿ, ಇದುವರೆಗೆ ಒಟ್ಟೂ 35500 ರೂ. ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top