Slide
Slide
Slide
previous arrow
next arrow

ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನಾ ನಿಯೋಗದಿಂದ ಪೌರಾಯುಕ್ತರ ಭೇಟಿ

300x250 AD

ದಾಂಡೇಲಿ : ಫೆಬ್ರವರಿ 28ರಂದು ದಾಂಡೇಲಿ ನಗರಸಭೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣದ ಕುರಿತಂತೆ ಪೂರ್ವಭಾವಿ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ನಿಯೋಗವು ಸಮಿತಿಯ ಅಧ್ಯಕ್ಷರಾದ ರಾಜಶೇಖರ್ ಐ.ಎಚ್. ಅವರ ನೇತೃತ್ವದಲ್ಲಿ ಶನಿವಾರ ನಗರಸಭೆಯಲ್ಲಿ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ರಾಜಶೇಖರ್.ಐ.ಎಚ್ ಅವರು ಮೂರ್ತಿ ಅನಾವರಣ ಕಾರ್ಯಕ್ರಮದ ಕುರಿತಂತೆ ಸಮಿತಿಯ ಅಭಿಪ್ರಾಯವನ್ನು ಪೌರಾಯುಕ್ತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತರಾದ ಆರ್ ಎಸ್ ಪವಾರ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣದ ಕುರಿತಂತೆ ಈಗಾಗಲೇ ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಅಗತ್ಯ ಮಾರ್ಗದರ್ಶನವನ್ನು ನೀಡಿದ್ದಾರೆ. ಪುತ್ಥಳಿ ಅನಾವರಣದ ಕುರಿತಂತೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಯಶಸ್ಸಿಗೆ ಮೂರ್ತಿ ಪ್ರತಿಷ್ಠಾಪನಾ ಸಮಿತಿಯು ಸಹಕರಿಸುವಂತೆ ವಿನಂತಿಸಿದರು.

300x250 AD

ನಿಯೋಗದಲ್ಲಿ ರಾಜಶೇಖರ್.ಐ.ಹೆಚ್ ಸೇರಿದಂತೆ ಪ್ರಮುಖರುಗಳಾದ ಚಂದ್ರಕಾಂತ ನಡಿಗೇರ, ರೇಣುಕಾ‌ ಬಂದಂ, ಅವಿನಾಶ್ ಘೋಡ್ಕೆ, ಮಹಾವೀರ ಕಾಂಬಳೆ, ಫಿರೋಜ್ ಖಾನ್, ಶ್ರೀಕಾಂತ ಅಸೋದೆ, ರೇಣುಕಾ ಭಜಂತ್ರಿ, ಸರಸ್ವತಿ ಚೌವ್ಹಾಣ್, ನೀಲಾ ಮಾದರ, ರಾಜೇಶ್ ನಿಂಬಾಳಕರ್, ವನ್ನೂರಪ್ಲ ಜರಿ, ಮಹಮ್ಮಸ್ ಗೌಸ್ ಬೇಟಗೇರಿ, ಮುಜೀಬಾ ಛಬ್ಬಿ, ರಾಜೇಶ್ ಕಾಂಬಳೆ, ಅಶೋಕ್ ಬೊಮ್ಮನಳ್ಳಿ, ಸತೀಶ್ ಚೌವ್ಹಾಣ್, ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ‌ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top