Slide
Slide
Slide
previous arrow
next arrow

ಮನರಂಜಿಸಿದ ‘ಸುಧನ್ವ ಮೋಕ್ಷ’ ಯಕ್ಷಗಾನ

300x250 AD

ಯಲ್ಲಾಪುರ: ತಾಲೂಕಿನ ಉಪಳೇಶ್ವರದ ರಂಗಮಂದಿರದಲ್ಲಿ ಶ್ರೀನಿಧಿ ಮಹಿಳಾ ಯಕ್ಷಕಲಾ ಬಳಗದಿಂದ ಮಹಿಳೆಯರ ರಂಗ ಪ್ರವೇಶ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ, ಸ್ತ್ರೀವೇಷಧಾರಿ ಸದಾಶಿವ ಮಲವಳ್ಳಿ ಹಾಗೂ ಚಂಡೆವಾದಕ ಪ್ರಮೋದ ಹೆಗಡೆ ಕಬ್ಬಿನಗದ್ದೆ ಅವರನ್ನು ಸಂಘಟನಯಿಂದ ಸನ್ಮಾನಿಸಲಾಯಿತು. ಸನ್ಮಾನಿತ ಕುರಿತು ಅಭಿನಂದನಾ ನುಡಿಗಳನ್ನಾಡಿದ ಅರ್ಥಧಾರಿ ಡಾ.ಮಹೇಶ ಭಟ್ಟ ಇಡಗುಂದಿ, ಯಕ್ಷಗಾನದ ಸೇವೆಯನ್ನು ಆರಾಧನೆಯ ನೆಲೆಯಲ್ಲಿ ಮಾಡಿಕೊಂಡು ಬಂದ ಕಲಾವಿದರನ್ನು ಗೌರವಿಸುತ್ತಿರುವುದು ಉತ್ತಮ ಕಾರ್ಯ. ಸಾಧಕರಿಗೆ ಊರಿನಲ್ಲಿ ಸಿಗುವ ಸನ್ಮಾನ ದೊಡ್ಡ ಪ್ರಶಸ್ತಿಗಿಂತ ಮೌಲ್ಯಯುತವಾದುದು ಎಂದರು.
ಕಾರ್ಯಕ್ರಮವನ್ನು ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಆರ್.ಎನ್.ಭಟ್ಟ, ಸುಬ್ರಾಯ ಭಾಗ್ವತ ಗಾಣಗದ್ದೆ, ಡಿ.ಎಂ.ಭಟ್ಟ ಮಾತನಾಡಿದರು.

ಗ್ರಾ.ಪಂ ಉಪಾಧ್ಯಕ್ಷೆ ಶಾರದಾ ಭಾಗ್ವತ, ಸದಸ್ಯರಾದ ಅಶೋಕ ಮರಾಠಿ, ಶಾಂತಿ ಪಟಗಾರ, ಎಲ್.ಎಸ್.ಎಂ.ಪಿ ನಿರ್ದೇಶಕ ಸುಬ್ರಾಯ ದಾನ್ಯಾನಕೊಪ್ಪ, ಬಾಳೆಗದ್ದೆ ಎಸ್.ಡಿ.ಎಂ.ಸಿ ಅಧ್ಯಕ್ಷ ವಿ.ಎಸ್.ಭಟ್ಟ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಪತ್ರಕರ್ತ ಶ್ರೀಧರ ಅಣಲಗಾರ, ಪಿಡಿಒ ರಾಜೇಶ ಶೇಟ್, ಸಂಘಟಕಿ ಸವಿತಾ ಭಟ್ಟ ಇತರರಿದ್ದರು. ನಂದಿತಾ ರಾಮಕೃಷ್ಣ ನಿರ್ವಹಿಸಿದರು. ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಹೆಗಡೆ ಜಂಬೆಸಾಲ ವಂದಿಸಿದರು.
ನಂತರ ಶ್ರೀನಿಧಿ ಮಹಿಳಾ ಯಕ್ಷಕಲಾ ಬಳಗದ ಮಹಿಳೆಯರು ಹಾಗೂ ಮಕ್ಕಳಿಂದ ಅನಂತ ಹೆಗಡೆ ಹಾಗೂ ಸದಾಶಿವ ಮಲವಳ್ಳಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಸುಧನ್ವ ಮೋಕ್ಷ ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

300x250 AD
Share This
300x250 AD
300x250 AD
300x250 AD
Back to top