Slide
Slide
Slide
previous arrow
next arrow

ಫೆ.24ಕ್ಕೆ ‘ಹಳ್ಳಿ ಹಬ್ಬ-2024’: ಗುರುವಂದನೆ, ಯಕ್ಷಗಾನ ಪ್ರದರ್ಶನ

300x250 AD

ಸಿದ್ದಾಪುರ: ತಾಲೂಕಿನ ಹಳ್ಳಿಬೈಲ್‌ನ ಸ್ಪಂದನಾ ಟ್ರಸ್ಟ್ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಕ್ರೀಡಾ, ಗುರುವಂದನೆ ಸೇರಿದಂತಹ ವಿಶೇಷ ‘ಹಳ್ಳಿ ಹಬ್ಬ-2024’ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಫೆ.24, ಶನಿವಾರ ಹಳ್ಳಿಬೈಲ್ ಸಮೀಪದ ಹುತ್ಗಾರ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 9.30ರಿಂದ ಕ್ರೀಡೋತ್ಸವ, 10.30ರಿಂದ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 5 ರ ನಂತರ ಮನರಂಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 9 ರಿಂದ ಸಭಾ ಕಾರ್ಯಕ್ರಮ, ಗುರುವಂದನೆ ನಡೆಯಲಿದೆ. ಹುತ್ಗಾರ್ ಶಾಲೆಯ ನಿಕಟಪೂರ್ವ ಶಿಕ್ಷಕ ಪಾಲಂಕರ್, ಶಿರಸಿ ಇವರು ಗುರುವಂದನೆ ಸ್ವೀಕರಿಸಲಿದ್ದು, ಮುಖ್ಯ ಅತಿಥಿಗಳಾಗಿ ನಾರಾಯಣ ಯಾಜಿ ಸಾಲೇಬೈಲ್, ನಿಲ್ಕುಂದ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೆಕಲ್ಲು ಉಪಸ್ಥಿತರಿರಲಿದ್ದಾರೆ. ಸ್ಪಂದನ ಟ್ರಸ್ಟ್ ಉಪಾಧ್ಯಕ್ಷ ಬಾಲಚಂದ್ರ ಹೆಗಡೆ ಕೊಡಮೂಡ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ನಂತರದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾ ರುದ್ರಕೋಪ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top