ಹಳಿಯಾಳ : ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯು ಉತ್ಕೃಷ್ಟ ಗುಣಮಟ್ಟದ ತರಬೇತಿಗಾಗಿ ದೇಶದ ಹಲವು ಪ್ರತಿಷ್ಠಿತ ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅವುಗಳಲ್ಲಿ ಬಹುರಾಷ್ಟ್ರೀಯ ಕಂಪನಿ Bosch ಜೊತೆಗೆ ಸಹ ತರಬೇತಿ ಹಾಗೂ ಉದ್ಯೋಗ ಸಂಬಂಧಿತ ಒಡಂಬಡಿಕೆ ಹೊಂದಿದೆ.
2016 ನೇ ಇಸವಿಯಲ್ಲಿ Bosch ಕಂಪನಿಯೂ BRIDGE SOFTS SKILL ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡು ತರಬೇತಿ ಕೇಂದ್ರವನ್ನು ಆರಂಭಿಸಲಾಯಿತು. ಕಳೆದ ಏಳುವರೆ ವರ್ಷದಲ್ಲಿ Softs Skill ತರಬೇತಿ ಮತ್ತು Care giver ತರಬೇತಿಯಡಿಯಲ್ಲಿ ತಾಲೂಕಿನ ನೂರಾರು ಅರ್ಹ ಯುವಕ, ಯುವತಿಯರಿಗೆ ತರಬೇತಿ ನೀಡಲಾಗಿದೆ. ಆ ಮೂಲಕ ಅವರ ಉದ್ಯೋಗ ಕೌಶಲ್ಯ ಮತ್ತು ಉದ್ಯಮಶೀಲತಾ ಸಾಮರ್ಥ್ಯವನ್ನು ಹೆಚ್ಚಿಸಿ ಜೀವನೋಪಾಯಕ್ಕೆ ನೇರವಾಗಿದೆ. ಪ್ರಸ್ತುತ ಸಂಸ್ಥೆಯಲ್ಲಿ ಆಯ್ದ 25 ವಿದ್ಯಾರ್ಥಿಗಳಿಗಾಗಿ ಆಟೋಮೋಟನ್ ತರಬೇತಿ ನೀಡಲಾಗುತ್ತಿದೆ.
ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಭಾಗದ Bosch Bridge ತರಬೇತಿ ಕೇಂದ್ರಗಳ ಮಹಾಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ Bosch company ಸಾಮಾಜಿಕ ಹೊಣೆಗಾರಿಕೆ ವಿಭಾಗದ ಹಿರಿಯ ಅಧಿಕಾರಿ ಆಶಿಸ್ ಜೈನ್ ಇವರು ದೇಶಪಾಂಡೆ ಐಟಿಐ ಕಾಲೇಜಿನ ಪ್ರಾಚಾರ್ಯರಾದ ದಿನೇಶ ಆರ್ ನಾಯ್ಕ ಇವರಿಗೆ ಪ್ರಶಂಸಾ ಫಲಕ ಮತ್ತು ಮುಂದಿನ ಎರಡು ವರ್ಷಗಳಿಗಾಗಿ ತರಬೇತಿ ಒಡಬಂಡಿಕೆ ನವೀಕರಣ ಪತ್ರ ನೀಡಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ಶ್ರೀದಾಸ ಕೊಲೇಕರ ಹಾಗೂ ಸಿಬಿಡಿ ಆರ್‌ಸೆಟಿಯ ವಿರೇಶ ತಾಳಿಕೊಟಿ ಇವರು ಸಹ ಉಪಸ್ಥಿತರಿದ್ದರು.