Slide
Slide
Slide
previous arrow
next arrow

ಫೆ.22ಕ್ಕೆ ವೆಂಕಟ್ರಮಣ ದೇವರ ವರ್ಧಂತಿ ಉತ್ಸವ

300x250 AD

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಬಾಳೆಗದ್ದೆ ಶ್ರೀ ವೆಂಕಟ್ರಮಣ ದೇವರ ವಾರ್ಷಿಕ ವರ್ಧಂತಿ ಉತ್ಸವ ಫೆ.22ರ ಗುರುವಾರ ಜರುಗಲಿದೆ.

ಮಾಘ ಶುದ್ದ ತ್ರಯೋದಶಿಯಂದು ನಡೆಯುವ ವಾರ್ಷಿಕ ವರ್ಧಂತಿ ಉತ್ಸವವು ಶ್ರೀ ಕ್ಷೇತ್ರ ಮಂಜಗುಣಿಯ ವೇ.ಮೂ. ಪುಟ್ಟ ಭಟ್ಟ ಅಣ್ಣಯ್ಯ ಭಟ್ಟ, ವೆ.ಮೂ ವೆಂಕಟಾಚಲ ಭಟ್ಟ ಇವರ ಆರ್ಚಾಯತ್ವದಲ್ಲಿ ಧಾರ್ಮಿಕ ವಿಧಿವಿಧಾನದಂತೆ ನೇರವೇರಲಿದೆ. 1008 ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮದ ನಂತರ ಸಾಂಸ್ಕ್ರತಿಕ ವೇದಿಕೆ ಕೊಳಗದ್ದೆ ಇವರಿಂದ ‘ಸಾಕು ತಂಗಿಯ ಸಂಕಟ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top