Slide
Slide
Slide
previous arrow
next arrow

ಬಿಜೆಪಿಯಿಂದ ಶಿವಾಜಿ‌ ಜಯಂತಿ ಆಚರಣೆ

300x250 AD

ಹಳಿಯಾಳ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಪಟ್ಟಣದ ಶಿವಾಜಿ ವೃತ್ತ, ಗೌಳಿ ಗಲ್ಲಿ ಹಾಗೂ ಕಿಲ್ಲಾ ಕೋಟೆ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ‌ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷರಾದ ವಿಠ್ಠಲ ಸಿದ್ಧನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ‌ ಅವರು ಅಪ್ರತಿಮ ಶೂರ, ಜಾತ್ಯಾತೀತ ಆಡಳಿತಗಾರ, ಯುದ್ಧ ತಂತ್ರಗಳು ಮತ್ತು ಶೌರ್ಯಕ್ಕೆ ಹೆಸರುವಾಸಿಯಾದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಹೋರಾಟ, ಅವರ ಸೃಷ್ಟಿಸಿದ ಇತಿಹಾಸ ನಿಜಕ್ಕೂ ಶ್ಲಾಘನೀಯ‌ ಎಂದರು.

300x250 AD

ಈ ಸಂದರ್ಭದಲ್ಲಿ ಕೆ.ಕೆ.ಎಂ.ಪಿ ಅಧ್ಯಕ್ಷರಾದ ಚೂಡಪ್ಪ ಬೋಬಾಟಿ, ಪುರಸಭೆ ಸದಸ್ಯರಾದ ಉದಯ ಹೂಲಿ, ಪ್ರಮುಖರಾದ ಶಿವಾಜಿ ಪಾಟೀಲ್, ಆನಂದ ಕಂಚನಾಳಕರ, ಯಲ್ಲಪ್ಪ ಹೊನ್ನೋಜಿ, ತಾನಾಜಿ ಪಟ್ಟೇಕರ, ಹನುಮಂತ ಚಲವಾದಿ, ನಾರಾಯಣ ಅಂತ್ರೋಳಕರ, ಮೋಹನ ಮೌಳಂಗಿ, ಆಕಾಶ ಉಪ್ಪಿನ, ಸುನೀಲ ‌ಬಾಗಳೆ, ರಘುನಾಥ ಮಾದರ, ಗೋಪಾಲ ಗರಗ, ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top