ಜೊಯಿಡಾ: ಪರಿಸರದಿಂದ ಪ್ರಾಣಿಗಳು ಎಷ್ಟು ಬೇಕೊ ಅಷ್ಟು ಮಾತ್ರ ತಮಗಾಗಿ ಬಳಸಿಕೊಳ್ಳುತ್ತವೆ.ಮನುಷ್ಯ ಮಾತ್ರ ಈ ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ತಾನು ಬಳಸಿದ್ದಲ್ಲದೆ ಉಳಿದದ್ದನೂ ಹಾಳು ಮಾಡಿ ಪರಿಸರದ ನಾಶಕ್ಕೆ ಕಾರಣಿಕರ್ತನಾಗಿದ್ದಾನೆ ಎಂದು ಸಂಜೀವನಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರವಿ ರೇಡ್ಕರ ಹೇಳಿದರು.
ಅವರು ರವಿವಾರ ಸಂಜೀವನಿ ಸೇವಾ ಸಂಸ್ಥೆ ಮತ್ತು ಕೈಗಾ ಬರ್ಡರ್ಸ್ ತಂಡ ವತಿಯಿಂದ ಜೊಯಿಡಾದಲ್ಲಿ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಷಿ ವೀಕ್ಷಣೆಯನ್ನ ಪ್ರತಿ ವರ್ಷ ಸಂಜೀವನಿ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳುವುದಕ್ಕೂ ಕಾರಣ ಇದೆ. ಪರಿಸರ ಉಳಿವಿಗಾಗಿ ನಾವು ನಮ್ಮಿಂದಾಗುವ ಅಳಿಲು ಸೇವೆಯನ್ನು ಈ ಮೂಲಕ ಮಾಡುತ್ತಿದ್ದೇವೆ ಎಂದರು.
ಕೈಗಾ ಬರ್ಡರ್ಸ್ ತಂಡದ ಮೊಹನದಾಸ ಮಾತನಾಡಿ ನಾವು ಕಳೆದ ೧೪ ವರ್ಷಗಳಿಂದ ನಮ್ಮ ಉದ್ಯೋಗದ ಜೊತೆಗೆ ಪಕ್ಷಿ ವೀಕ್ಷಣೆಯ ಕಾರ್ಯವನ್ನು ಮಾಡಿಕೊಂಡು ಇದರ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿದ್ದೆವೆ. ಬರಿ ಪಕ್ಷಿ ವೀಕ್ಷಣೆ ಅಷ್ಟೆ ಅಲ್ಲದೆ ಜೇಡಗಳು, ಪಾತರಗಿತ್ತಿಗಳು,ಹುಳಗಳ ಬಗ್ಗೆ ಕೂಡಾ ತಿಳಿಯುವ ಕೆಲಸ ಮಾಡುತ್ತಿದ್ದೇವೆ. ಪಕ್ಷಿಗಳ ಬಗ್ಗೆ ಅಧ್ಯಯನ ಅಷ್ಟೆ ಮಾಡಬೇಕೆಂದಿಲ್ಲ. ಪರಿಸರ ಜೊತೆಗೆ ಹೊಂದಿಕೊಂಡು ಬಾಳುವ,ಪರಿಸರ ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಈ ಪಕ್ಷಿ ವೀಕ್ಷಣೆಯಲ್ಲಿ ಒಟ್ಟೂ 70 ಕ್ಕಿಂತ ಹೆಚ್ಚು ವಿಧದ ಪಕ್ಷಿಗಳನ್ನು ಗುರುತಿಸಲಾಯಿತು.
ಈ ಸಂದರ್ಭದಲ್ಲಿ ಸಂಜೀವನಿ ಸೇವಾ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷರಾದ ರವಿ ರೇಡ್ಕರ,ಅಧ್ಯಕ್ಷರಾದ ಸುನಿಲ ದೇಸಾಯಿ,ಕೈಗಾ ಬರ್ಡರ್ಸ್ ಮೊಹನದಾಸ ಜಿ,ದಿನೇಶ ಗಾಂವಕರ,ಕೆ ಹರೀಶ,ಪಿ ವಿಜಯನ್, ಮಹಾಂತೇಶ ಒಶಿಮಠ,ಈಶ್ವರಿ ದೇಸಾಯಿ,ಅದಿತ್ಯ ರೆಡ್ಕರ ಮುಂತಾದವರು ಉಪಸ್ಥಿತರಿದ್ದರು.