Slide
Slide
Slide
previous arrow
next arrow

ಅಗಲಿದ ಸಾಹಿತ್ಯ ಪ್ರೇಮಿ ಶಿವಾನಂದ.ಎಸ್. ನಾಯ್ಕ್‌ಗೆ ನುಡಿನಮನ

300x250 AD

ದಾಂಡೇಲಿ: ಅಗಲಿದ ಕವಿ ಮನಸ್ಸಿನ‌ ಉತ್ಸಾಹಿ ಸಾಹಿತ್ಯ ಪ್ರೇಮಿ ಹಾಗೂ ಕಲಾವಿದ ಶಿವಾನಂದ.ಎಸ್. ನಾಯ್ಕರಿಗೆ ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ‌ ಸಲ್ಲಿಸುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ಎಸ್. ನಾಯ್ಕ ಭಾವಚಿತ್ರಕ್ಕೆ ಪುಷ್ಪ ಗೌರವವನ್ನು ಸಲ್ಲಿಸಲಾಯಿತು. ಆನಂತರ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

300x250 AD

ನಂತರ ನಡೆದ ನುಡಿ ನಮನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ.ಎನ್.ವಾಸರೆ, ಕಸಾಪ‌ ಜಿಲ್ಲಾ ಕೋಶಾಧ್ಯಕ್ಷರಾದ ಮುರ್ತುಜಾ ಆನೆಹೊಸುರ, ತಾಲ್ಲೂಕು ಕಸಾಪ ಅಧ್ಯಕ್ಷರಾದ ನಾರಾಯಣ ನಾಯ್ಕ, ಹಾಗೂ ಪ್ರಮುಖರಾದ ಪ್ರವೀಣ ನಾಯ್ಕ, ಶ್ರೀಮಂತ ಮದರಿ, ನಾಗೇಶ ನಾಯ್ಕ, ವೆಂಕಮ್ಮ ಗಾಂವಕರ, ಆಶಾ ದೇಶಭಂಡಾರಿ, ಹಿರಿಯರಾದ ಎಮ್.ಆರ್.ನಾಯಕ, ಜೋಯಿಡಾ ತಾಲ್ಲೂಕು ಕಸಾಪ ಅಧ್ಯಕ್ಷರಾದ ಪಾಂಡುರಂಗ ಪಟಗಾರ, ಮೊದಲಾದವರು ಶಿವಾನಂದ ಎಸ್ ನಾಯ್ಕ ಅವರ ಜೀವನ ವ್ಯಕ್ತಿತ್ವ ಕಲಾಸೇವೆ ಮತ್ತು ಸಾಹಿತ್ಯ ಸೇವೆಯನ್ನು ಸ್ಮರಿಸಿ, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.

Share This
300x250 AD
300x250 AD
300x250 AD
Back to top