ಜೋಯಿಡಾ : ಅತಿ ದೊಡ್ಡ ಗ್ರಾಮ ಪಂಚಾಯತಿ ಮತ್ತು ಅತಿ ಹೆಚ್ಚು ಜನ ವಸತಿಯನ್ನು ಹೊಂದಿರುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಾಲೂಕಿನ ರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಮನಗರದ ಪಶುವೈದ್ಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ಸ್ಥಳೀಯ ಹೈನುಗಾರಿಕೆಯನ್ನೇ ನಂಬಿರುವ ರೈತರು ಸಂಕಷ್ಟವನ್ನು ಅನುಭವಿಸುವಂತಾಗಿದೆ. ದನ ಕರುಗಳಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಲ್ಲದಿರುವುದರಿಂದ ಜಾನುವಾರುಗಳ ರಕ್ಷಣೆಗೆ ರೈತರು ಹೆಣಗಾಡಬೇಕಾಗಿದೆ. ಆದ್ದರಿಂದ ಕೂಡಲೇ ಖಾಯಂ ಪಶು ವೈದ್ಯರನ್ನು ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಆಗ್ರಹಿಸಿ ರಾಮನಗರ ಗ್ರಾಮ ಪಂಚಾಯಿತಿಗೆ ಸ್ಥಳೀಯರು ಶುಕ್ರವಾರ ಮನವಿಯನ್ನು ನೀಡಿದ್ದಾರೆ.
ಮಂಜುನಾಥ್ ನಾಯ್ಕ, ಪಿ.ಎಸ್. ದೇಸಾಯಿ, ಪ್ರಭಾಕರ್ ಜಾತ್ರೋಳ್ಕರ್, ಮಂಜುನಾಥ್ ದೇಸಾಯಿ, ಕಿರಣ್ ದೇವಿದಾಸ, ಕೃಷ್ಣಾ ದೇಸಾಯಿ ಮೊದಲಾದವರು ಮನವಿಯನ್ನು ನೀಡಿದರು.