ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಜನವರಿ ತಿಂಗಳಲ್ಲಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಎಂ.ಪಿ.ಇ.ಸೊಸೈಟಿ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಸಭಾಗಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ 11 ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಗೌರವಿಸಲಾಯ್ತು. ಶಾಲು ಹಾಗೂ ಸ್ಮರಣಿಕೆಯನ್ನು ನೀಡಿ ಅವರನ್ನು ಅಭಿನಂದಿಸಲಾಯಿತು. ಉತ್ತಮ ಫಲಿತಾಂಶಕ್ಕೆ ಕಾರಣರಾದ ಉಪನ್ಯಾಸಕರನ್ನು ಸಹ ಇದೇ ವೇಳೆ ಪ್ರಶಂಸಿಸಿ ಗೌರವಿಸಲಾಯಿತು. ಕು.ಎನ್.ಸುಮಂತ್ -95.8, ಕು.ಆದರ್ಶ .ಜಿ.ಹೆಗಡೆ-94.8, ಕು.ವಿಠ್ಠಲ್ ವಿ ಭಟ್ -93.1 , ಕು.ಆದಿತ್ಯ.ಎಸ್.ಭಟ್ -93.3, ಕು.ಸ್ವಾತಿ.ಕೆ.ಹೆಗಡೆ -90.2 , ಕು.ಆದರ್ಶ.ಎಸ್.ಹೆಗಡೆ -85 , ಕು.ಪುನೀತ್.ಎಂ.ಆಚಾರಿ-83.5, ಕು.ಶ್ರದ್ಧಾ.ಭಟ್ , 82.6 , ಕು.ಅಕ್ಷಯ್.ಎಸ್.ಭಟ್ 80.5 ಪರ್ಸಂಟೈಲ್ ಮಾಡಿ ಅಭಿನಂದನೆಗೆ ಭಾಜರಾಗಿದ್ದಾರೆ.
ಇದೇ ವೇಳೆ ಮಾತನಾಡಿದ ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಶಿವಾನಿ ಮಾತನಾಡಿ ಈ ಫಲಿತಾಂಶ ನಾವು ಸೋತು ಪಡೆದಿದ್ದು. 2015 ರಿಂದ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬೇಕೆಂಬ ಕಾರಣದಿಂದ ನಿರಂತರ ಪರಿಶ್ರಮವನ್ನು ಪಟ್ಟಿದ್ದೇವೆ. ಈಗ ಬಂದಿರುವ ಫಲಿತಾಂಶಕ್ಕೆ ಕಾರಣ ನಮ್ಮ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು. ಬೇರೆ ಜಿಲ್ಲೆಗೆ ಹೋಗಿ ಕೋಚಿಂಗ್ ತೆಗೆದುಕೊಂಡರೆ ಮಾತ್ರ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯ ಅನ್ನುವ ಮಾತನ್ನು ನಮ್ಮವರು ಸುಳ್ಳಾಗಿಸಿದ್ದಾರೆ. ಹೊರ ಜಿಲ್ಲೆಯ ಕಾಲೇಜುಗಳು ಎಸ್.ಎಸ್.ಎಲ್.ಸಿ ಯಲ್ಲಿ ತೊಂಬತ್ತಕ್ಕಿಂತ ಹೆಚ್ಚು ಆದವರನ್ನು ವಿಜ್ಞಾನ ವಿಭಾಗಕ್ಕೆ ಸೇರಿಸಕೊಂಡು ಫಲಿತಾಂಶವನ್ನು ಒಳ್ಳೇಯದಾಗಿ ನೀಡುತ್ತಾರೆ. ಆದರೆ ನಮ್ಮ ಕಾಲೇಜು ಯಾವುದೇ ನಿಯಮಗಳನ್ನು ಹಾಕದೇ ಅವರ ಆಯ್ಕೆಗೆ ಮನ್ನಣೆಯನ್ನು ನೀಡಿ ಕಲಿಯಲು ಅವಕಾಶವನ್ನು ನೀಡುತ್ತಾ ಬಂದಿದ್ದೇವೆ. ಸಾಧನೆಯನ್ನು ಮಾಡಲು ನಮ್ಮಲ್ಲಿ ಧೃಡ ಸಂಕಲ್ಪವಿರಬೇಕು. ಜೊತೆಗೆ ಮನಸ್ಸು ಸಹ ನಮ್ಮ ಹಿಡಿತದಲ್ಲಿ ಇರಬೇಕು. ಅಂದರೆ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ ಎಂದು ನುಡಿದರು.
ಇದೇ ವೇಳೆ ಎಂ.ಪಿ.ಇ.ಸೊಸೈಟಿಯ ಉಪಾಧ್ಯಕ್ಷ ನಾಗರಾಜ್ ಕಾಮತ್, ಖಜಾಂಚಿ ಉಮೆಶ್ ನಾಯ್ಕ, ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರ ಡೈರೆಕ್ಟರ್ ಡಾ.ಶಿವರಾಮ್ ಶಾಸ್ತ್ರಿ ವೇದಿಕೆ ಮೇಲೆ ಹಾಜರಿದ್ದರು. ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ. ಎಂ.ಎಚ್. ಭಟ್ ಸ್ವಾಗತಿಸಿದರು, ವಿದ್ಯಾರ್ಥಿನಿ ನಿರ್ಮಲಾ ಹೆಗಡೆ ಪ್ರಾರ್ಥಿಸಿದರು. ಎಂ.ಪಿ.ಇ.ಸೋಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ ವಂದಿಸಿದರು. ಉಪನ್ಯಾಸಕಿಯರಾದ ಹೇಮಾ ಭಟ್, ಶೈನಾ ಹೊರ್ಟಾ ನಿರೂಪಿಸಿದರು.