Slide
Slide
Slide
previous arrow
next arrow

ಬುಡಕಟ್ಟು ಕ್ಷೇತ್ರದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ಮುನಿರಾಜು

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಹಾಗೂ ಮೂಲ ನಿವಾಸಿ ಪಾರಂಪರಿಕ ಸಮುದಾಯಗಳ ಕುರಿತ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಅವಶ್ಯಕತೆಯಿದೆ ಎಂದು ಕೇಂದ್ರ ನೀತಿ ಆಯೋಗದ ಡೆಪ್ಯೂಟಿ ಅಡ್ವೈಸರ್ ಡಾ. ಮುನಿರಾಜು ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ಸ್ಕೊಡ್‌ವೆಸ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಬುಡಕಟ್ಟು ಹಾಗೂ ಸಮುದಾಯ ಆಧಾರಿತ ಚಟುವಟಕೆಗಳನ್ನು ಪರಿವೀಕ್ಷಣೆ ನಡೆಸಿ ಮಾತನಾಡಿ, ಸ್ಕೊಡ್‌ವೆಸ್ ಸಂಸ್ಥೆ ಬುಡಕಟ್ಟು ಹಾಗೂ ಆದಿವಾಸಿಗಳ ಕುರಿತು ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಡಾ. ಮುನಿರಾಜುರವರು ಉತ್ತರ ಕನ್ನಡ ಜಿಲ್ಲೆ ವಿಭಿನ್ನ ಹಾಗೂ ವಿಸ್ತಾರವಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿದ ಜಿಲ್ಲೆ. ಈ ಜಿಲ್ಲೆಯ ಬುಡಕಟ್ಟು ಮತ್ತು ಪಾರಂಪರಿಕ ಸಮುದಾಯಗಳಿಗೂ ಇತರ ಜಿಲ್ಲೆಗಳಲ್ಲಿರುವ ಸಮುದಾಯಗಳಿಗೂ ಹಲವಾರು ಭಿನ್ನತೆಗಳಿವೆ. ಒಂದೇ ಮೂಲದ ಸಮುದಾಯಗಳಾಗಿದ್ದರೂ ಕೆಲವು ಸಮುದಾಯಗಳು ಬೇರೆ ಬೇರೆ ಜಿಲ್ಲೆ, ರಾಜ್ಯಗಳಲ್ಲಿ ಬೇರೆ ಬೇರೆ ವರ್ಗ ಹಾಗೂ ಸ್ಥಾನಮಾನಗಳನ್ನು ಹೊಂದಿವೆ. ಇದರಿಂದ ನಿಜವಾದ ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳಿಗೆ ಸಿಗಬೇಕಾದ ಅವಕಾಶಗಳು ತಪ್ಪುವ ಸಾಧ್ಯತೆಯಿದೆ ಈ ಹಿನ್ನಲೆಯಲ್ಲಿ ಎಲ್ಲಾ ಸಮುದಾಯಗಳ ನೈಜ ಚಿತ್ರಣ ನೀಡುವ ಜನಾಂಗೀಯ ಸಂಶೋಧನೆಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರಲ್ಲದೇ ಶೀಘ್ರವೇ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಜಿಲ್ಲೆಯ ಬುಡಕಟ್ಟು ಹಾಗೂ ಸಾಂಪ್ರದಾಯಿಕ ಸಮುದಾಯಗಳ ಸಮಸ್ಯೆ ಹಾಗೂ ಸವಾಲುಗಳ ಕುರಿತು ವಿವರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲಾಖಾ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ಕೇಂದ್ರ ನೀತಿ ಆಯೋಗದ ಡೆಪ್ಯೂಟಿ ಅಡ್ವೈಸರ್ ಡಾ. ಮುನಿರಾಜುರವರನ್ನು ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪರವಾಗಿ ಅಭಿನಂದಿಸಲಾಯಿತು. ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top