ಶಿರಸಿ: ತಾಲೂಕಿನ ಗಿಳಿಗುಂಡಿಯಲ್ಲಿ ಫೆ.17 ರಂದು ಶ್ರೀಕ್ಷೇತ್ರ ಮಂಜುಗುಣಿ ಶ್ರೀ ವೆಂಕಟ್ರಮಣ ದೇವರ ಪೂರ್ಣ ಅನುಗ್ರಹ ಪ್ರಾಪ್ತಿಗಾಗಿ ಶ್ರೀಸತ್ಯನಾರಾಯಣ ವ್ರತಕಥಾ ಪೂಜೆ ಸೇವೆ, ಗುರುಪಾದುಕಾ ಪೂಜೆ, ತುಳಸಿ ಅರ್ಚನೆ, ಪಂಚಾಮೃತ, ವಿಷ್ಣು ಸಹಸ್ರನಾಮ ಪೂಜೆಯ ಸೇವೆಗಳು ನಡೆಯಲಿವೆ.
ಶ್ರೀ ದೇವರ ಮೂಲ ದಿವ್ಯ ಮೂರ್ತಿಯು ಪ್ರಾದುರ್ಭಾವ ಹೊಂದಿದ(ಮೈದೋರುದ) ಪವಿತ್ರ ಪುಣ್ಯ ಸ್ಥಳದ ಶ್ರೀದೇವರ ದಿವ್ಯಮೂರ್ತಿಯು ಉದ್ಭವವಾದ ಶಿಲಾಹಾಸಿನ ಮೇಲೆ ಶ್ರೀದೇವರ ಪ್ರಧಾನ ಉತ್ಸವ ಮೂರ್ತಿಗೆ ಸತ್ಯನಾರಾಯಣ ಪೂಜೆ ಹಾಗೂ ಸಪಾದ ಭಕ್ಷ್ಯ ನೈವೇದ್ಯ ನಡೆಯಲಿದೆ. ಸಂಜೆ ಅಶ್ವರಥೋತ್ಸವ ನಡೆಯಲಿದೆ.
ಬೆಳಿಗ್ಗೆ 8.15 ಗಂಟೆಗೆ ಮಂಜುಗುಣಿಯಿಂದ ಗಿಳಿಗುಂಡಿಗೆ ಮೌನಯಾತ್ರಾ ಪ್ರಯಾಣ, ಬೆಳಿಗ್ಗೆ 10.15 ಗಂಟೆಗೆ ಗಿಳಿಗುಂಡಿಯಲ್ಲಿ ಶ್ರೀದೇವರಿಗೆ ಹಾಗೂ ಉದ್ಭವ ಸ್ಥಾನದಲ್ಲಿರುವ ಗೋಪಾದ, ಮುನಿಪಾದ ಚಿಹ್ನೆಗಳಿಗೆ ಪೂಜೆ, ಶ್ರೀತಿರುಮಲ ಯೋಗಿಗಳ ತಪೋಗುಹೆಯಲ್ಲಿ ಗುರುಪಾದುಕಾ ಪೂಜೆ, ಬೆಳಿಗ್ಗೆ 10.30 ರಿಂದ ಶ್ರೀದೇವರಿಗೆ ಕಲ್ಪೋಕ್ತ ಸತ್ಯನಾರಾಯಣ ಪೂಜಾರಂಭ, ಬೆಳಿಗ್ಗೆ 11.45 ಕ್ಕೆ ಮಹಾಮಂಗಳಾರತಿ ಹಾಗೂ ಕಥಾಶ್ರವಣ, ನಂತರ ತೀರ್ಥ ಪ್ರಸಾದ ವಿತರಣೆ, ಮಹಾಪ್ರಸಾದ ಭೋಜನ, ಸಂಜೆ 4 ಗಂಟೆಗೆ ಶ್ರೀಕ್ಷೇತ್ರಕ್ಕೆ ಶ್ರೀದೇವರ ಮರುಪ್ರಯಾಣ ಹಾಗೂ ಅಶ್ವರಥೋತ್ಸವ ನಡೆಯಲಿದೆ.
ಫೆ.18 ರಂದು ಬೆಳಿಗ್ಗೆ 10 ಗಂಟೆಯಿಂದ ಶ್ರೀಕ್ಷೇತ್ರ ಮಂಜುಗುಣಿ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ವ್ರತಕಥಾ ಪೂಜಾ ಕಾರ್ಯಕ್ರಮ ಹಾಗೂ ಸಂಜೆ 5 ಗಂಟೆಯಿಂದ ನೌಕಾವಿಹಾರೋತ್ಸವ ಹಾಗೂ ಅಶ್ವರಥೋತ್ಸವ ನಡೆಯಲಿದೆ.
ಬೆಳಿಗ್ಗೆ 9.30 ಗಂಟೆಯಿಂದ ಶ್ರೀ ವೆಂಕಟೇಶ ದೇವರ ಪೂಜಾ ಆರಂಭ, ಮಧ್ಯಾಹ್ನ 1 ಗಂಟೆಯಿಂದ ತೀರ್ಥ-ಪ್ರಸಾದ ಮತ್ತು ಪ್ರಸಾದ ಭೋಜನ ಇರಲಿದೆ. ಸಂಜೆ 5 ಗಂಟೆಯಿಂದ ಶ್ರೀ-ಭೂ ಸಹಿತನಾದ ಶ್ರೀ ವೆಂಕಟ್ರಮಣ ದೇವರ ನೌಕಾವಿಹಾರೋತ್ಸವ ಹಾಗೂ ಕೆರೆಯ ದಡದಲ್ಲಿ ರಜತಮಯ ಅಶ್ವರಥದಲ್ಲಿ ಶ್ರೀ-ಭೂ ರಮಣನಾದ ಶ್ರೀಶ್ರೀನಿವಾಸ ದೇವರ ತೀರ್ಥ-ತೀರ-ವಿಹಾರ ಉತ್ಸವಗಳು ಪ್ರತ್ಯೇಕ ಮೂರ್ತಿಗಳೊಂದಿಗೆ ನಡೆಯಲಿದೆ.
ವಿಹಾರೋತ್ಸವದ ನಂತರ ಶ್ರೀದೇವಸ್ಥಾನದ ಎದುರು ಕಲ್ಯಾಣ ವೇದಿಕೆಯಲ್ಲಿ ಉತ್ಸವ ಮೂರ್ತಿಗಳೊಂದಿಗೆ ರಾಜಭೋಗಾರ್ಪಣೆ, ಪಟ್ಟಗಾಣಿಕೆ ಸಮರ್ಪಣೆ, ತೀರ್ಥಪ್ರಸಾದ ವಿತರಣೆ ನಡೆಯಲಿದ್ದು, ನಂತರ ಮಹಾಪ್ರಸಾದ ಭೋಜನ ವ್ಯವಸ್ಥೆ ಇದೆ.
ಹೆಚ್ಚಿನ ವಿವರಗಳಿಗಾಗಿ ಮೊ.ನಂ. : ೬೩೬೨೦೨೪೯೨೧, ೮೨೭೭೨೨೬೭೦೮, ೮೨೭೭೪೧೯೬೫೭ ಸಂಪರ್ಕಿಸಬಹುದು.