Slide
Slide
Slide
previous arrow
next arrow

ಜೋಯಿಡಾದಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬ: ವಿವಿಧ ಸ್ಪರ್ಧಾ ಕಾರ್ಯಕ್ರಮ

300x250 AD

ಜೋಯಿಡಾ : ಹಾರ್ನಬಿಲ್ ಹಕ್ಕಿ ಹಬ್ಬ-2024 ರ ಸಂಭ್ರಮದ ಪ್ರಯುಕ್ತ ಅರಣ್ಯ ಇಲಾಖೆಯ ಆಶ್ರಯದಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಜೋಯಿಡಾ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನಬಿಲ್ ಹಕ್ಕಿಯ ಬಗ್ಗೆ ಅರಿವು ಮೂಡಿಸಲು  ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು  ಶುಕ್ರವಾರ  ಜೋಯಿಡಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ತಾಲೂಕಿನ ರಾಮನಗರ, ಜಗಲ್ಬೆಟ್, ಅನ್ಮೋಡಾ, ಉಳವಿ ಮೊದಲಾದ ಕಡೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಹಾರ್ನಬಿಲ್ ಹಕ್ಕಿಯ ಬಗ್ಗೆ ಅರಿವು ಮೂಡಿಸಲು ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಕ್ಲೇ ಮಾಡಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮ್ಮದ್ ಶೇಖ್ ಉದ್ಘಾಟಿಸಿ ಹಕ್ಕಿಗಳಲ್ಲಿ ಅತ್ಯಂತ ವಿಶಿಷ್ಟ ಜಾತಿಯ ಹಕ್ಕಿಯೆಂದು ಗುರುತಿಸಲ್ಪಟ್ಟ ಹಾರ್ನಬಿಲ್ ಹಕ್ಕಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಜೋಯಿಡಾದಲ್ಲಿ ಇರುವುದು ಈ ಭಾಗದ ಪ್ರವಾಸೋದ್ಯಮ ಬೆಳವಣಿಗೆಗೂ ಕಾರಣವಾಗಿದೆ. ಈ ಹಕ್ಕಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ ಎಂದರು.

300x250 AD

ವಲಯರಣ್ಯಾಧಿಕಾರಿ ಮಹಮ್ಮದ್ ಶಫಿ ಈ ಸ್ಪರ್ಧೆಯ ಉದ್ದೇಶವನ್ನು ವಿವರಿಸಿ, ಹಾರ್ನಬಿಲ್ ಹಕ್ಕಿಗಳ ವಿಶೇಷತೆಯನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಅಂಜಲಿ ರಾಣಿ ವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉಪ ವಲಯಾರಣ್ಯಾಧಿಕಾರಿಗಳಾದ ಉಮೇಶ್ ಮತ್ತು ಸಂತೋಷ್ ಗವಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Share This
300x250 AD
300x250 AD
300x250 AD
Back to top