Slide
Slide
Slide
previous arrow
next arrow

ಫೆ.‌14ರಿಂದ ತನಕ ನಿಚ್ಚಲಮಕ್ಕಿಯಲ್ಲಿ ವರ್ಧಂತಿ ಮಹೋತ್ಸವ

300x250 AD

ಭಟ್ಕಳ: ನಾಮಧಾರಿ ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಹಾಗೂ ಪಾಲಕಿ ಮಹೋತ್ಸವ ಕಾರ್ಯಕ್ರಮವು ಫೆಬ್ರವರಿ 14 ರಿಂದ 17 ರ ತನಕ ನಡೆಯಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು.

ಅವರು ಶುಕ್ರವಾರದಂದು ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆಬ್ರವರಿ 14 ಬುಧವಾರದಂದು ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ ನಡೆಯಲಿದ್ದು, ಸಕಲ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಫೆಬ್ರವರಿ 15 ಗುರುವಾರದಂದು ಸಂಜೆ 5 ಗಂಟೆಗೆ ಹರಿ ನಾಮಸ್ಮರಣೆ ಕುಣಿತ (ಹೌದರಾಯನ ಕುಣಿತ) ನಡೆಯಲಿದ್ದು, ಸಂಜೆ 7 ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿಯ ಆಗಮನ ಆಗಲಿದೆ‌.
ಫೆಬ್ರವರಿ 16 ರಂದು ಮುಂಜಾನೆ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ಪುಣ್ಯಹವಾಚನ, ಮಹಾ ಸಂಕಲ್ಪ, ಕಳಶಾರಾಧನೆ, ಗಣಹೋಮ ಹಾಗೂ ಶ್ರೀ ಗುರುಮಠದಿಂದ ನಡೆಯಲಿದೆ‌. ಬೆಳಿಗ್ಗೆ 10 ಗಂಟೆಗೆ ಶ್ರೀ ವೆಂಕಟರಮಣ ದೇವರಿಗೆ ಬಂಗಾರದ ವರದ ಹಸ್ತ ಹಾಗೂ ಅಭಯ ಹಸ್ತಗಳನ್ನು ದೇವಸ್ಥಾನ ಆಡಳಿತ ಕಮಿಟಿಯಿಂದ ದೇವರಿಗೆ ಅರ್ಪಿಸಲಿದ್ದು ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅಮೃತ ಹಸ್ತದಿಂದ
ಅವರ ದಿವ್ಯ ಉಪಸ್ಥಿತಿಯಲ್ಲಿ ಸಮರ್ಪಿಸಲಿದ್ದಾರೆ‌.‌

10.30 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಪೂಜ್ಯ ಗುರುಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ, 1 ಗಂಟೆ ಯಿಂದ 3 ಗಂಟೆತ ತನಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 3.30 ರಿಂದ ಶ್ರೀ ದೇವರ ಪಾಲಕಿ ಮೆರವಣಿಗೆ ನಡೆಯಲಿದ್ದು, ರಾತ್ರಿ 11 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

300x250 AD

ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲಾ ಸಮಾಜದ ಜನರು ಭಾಗವಹಿಸಿ ದೇವರ ಕ್ರಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದರು. ಫೆಬ್ರವರಿ 17  ರಂದು ಬೆಳಿಗ್ಗೆ 8.30 ಗಂಟೆಗೆ ಶ್ರೀ ದೇವರಿಗೆ ಓಕಳಿ ಸೇವೆ (ಅವಭ್ರತ ಸ್ನಾನ), 11 ಗಂಟೆಗೆ ಫಲಾವಳಿ ವಸ್ತುಗಳ ವಿಲೇವಾರಿ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ರಾತ್ರಿ 9.30 ಕ್ಕೆ ತ್ರಿನೇತ್ರ ಕಲಾತಂಡ ಉಪ್ಲಾಡಿ ಇವರಿಂದ ಸಾಮಾಜಿಕ ನಾಟಕ ‘ಗಗ್ಗರ ದೈವದನಿ’ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಶ್ರೀ ದೇವರ ಪಾಲಕಿ ಉತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸುವವರು ಫೆಬ್ರವರಿ 14-15 ರ ಒಳಗೆ ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಹೇಳಿದರು.

ಈ ಸಂದರ್ಭದಲ್ಲಿ ಕ್ರಷ್ಣ ನಾಯ್ಕ ಆಸರಕೇರಿ, ಪ್ರಕಾಶ ನಾಯ್ಕ, ಶಂಕರ ನಾಯ್ಕ, ಎಮ್.ಕೆ.ನಾಯ್ಕ, ಕೆ.ಆರ್.ನಾಯ್ಕ, ಮಹೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ಶಿವರಾಮ ನಾಯ್ಕ, ಶ್ರೀಧರ ನಾಯ್ಕ ಮುಂತಾದ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top