Slide
Slide
Slide
previous arrow
next arrow

ದಾಂಡೇಲಿ ಪ್ರೀಮಿಯರ್ ಲೀಗ್‌ ಪಂದ್ಯಾವಳಿಗೆ ಅದ್ದೂರಿ ಚಾಲನೆ

300x250 AD

ದಾಂಡೇಲಿ : ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಆಶ್ರಯದಡಿ ನಗರದ ಡಿ.ಎಫ್.ಎ ಮೈದಾನದಲ್ಲಿ ಆಯೋಜಿಸಲಾಗಿದ್ದ ದಾಂಡೇಲಿ ಪ್ರೀಮಿಯರ್ ಲೀಗ್ -ಸೀಸನ್ 3 ಪಂದ್ಯಾವಳಿಗೆ ಅದ್ದೂರಿ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಂಟು ತಂಡಗಳ ಆಟಗಾರರನ್ನು ಮೆರವಣಿಗೆಯ‌ ಮೂಲಕ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

ತಹಶೀಲ್ದಾರ್ ಶೈಲೇಶ್ ಪರಮಾನಂದ, ಡಿವೈಎಸ್ಪಿ ಶಿವಾನಂದ ಕಟಗಿ, ನಗರಸಭೆಯ ಪೌರಾಯುಕ್ತರಾದ ಆರ್‌.ಎಸ್‌.ಪವಾರ್ ಅವರು ದೀಪ ಬೆಳಗಿಸಿ ಪಂದ್ಯಾವಳಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ‌ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯು ಅತ್ಯಂತ ವ್ಯವಸ್ಥಿತವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿದೆ. ಕಳೆದ ವರ್ಷದ ಪಂದ್ಯಾವಳಿಯ ಉದ್ಘಾಟನೆಯ ಸಂದರ್ಭದಲ್ಲಿ ಮುಂದಿನ ವರ್ಷದಿಂದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಮಾಡುವಂತೆ ತಾನು ಪ್ರಸ್ತಾಪಿಸಿರುವುದನ್ನು ನೆನಪಿಸಿಕೊಂಡು ಪಂದ್ಯಾವಳಿಗೆ ಶುಭವನ್ನು ಕೋರಿದರು.

300x250 AD

ಡಿವೈಎಸ್ಪಿ ಶಿವಾನಂದ ಕಟಗಿ, ಮಾತನಾಡಿ ರಾಜ್ಯ ರಾಷ್ಟ್ರಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿದ ರೀತಿಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇದು ದಾಂಡೇಲಿ ನಗರಕ್ಕೆ ಬಹುದೊಡ್ಡ ಹೆಮ್ಮೆ. ಇಂತಹ ಪಂದ್ಯಾವಳಿ ನಿರಂತರವಾಗಿ ನಡೆಯುವಂತಾಗಲಿ ಎಂದರು.

ವೇದಿಕೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್, ನಗರಸಭೆಯ ಸದಸ್ಯರಾದ ದಶರಥ ಬಂಡಿವಡ್ಡರ, ಅನಿಲ್ ನಾಯ್ಕರ್, ಪ್ರೀತಿ ನಾಯರ್, ಸಿಪಿಐ ಭೀಮಣ್ಣ.ಎಂ.ಸೂರಿ, ಕರ್ನಾಟಕ ಸಂಘದ ಅಧ್ಯಕ್ಷರಾದ ಯು.ಎಸ್.ಪಾಟೀಲ್,  ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್, ಚೇರ್ಮೆನ್ ಕುಲದೀಪ್ ಸಿಂಗ್ ರಜಪೂತ್, ಸಮಿತಿಯ ಪದಾಧಿಕಾರಿಗಳಾದ ಅನಿಲ್ ಪಾಟ್ನೇಕರ, ಸಚಿನ್ ಕಾಮತ್, ನಿತಿನ್ ಕಾಮತ್, ಜೋಸೆಫ್ ಗೋನ್ಸಾಲಿಸ್, ಇಮಾಮ್ ಸರ್ವರ್, ಪ್ರಮೋದ್ ಕದಂ, ರಮೇಶ್ ನಾಯ್ಕ,  ಶಮಲ್ ಅಬ್ದುಲ್ಲಾ, ನರಸಿಂಗದಾಸ್ ರಾಟಿ,  ಅತುಲ್ ಮಾಡ್ದೋಳ್ಕರ್, ಸಂದೀಪ್ ರಜಪೂತ್, ಸೈಯದ್ ವಸಿಂ ಅಂಕೋಲೆಕರ್  ಮೊದಲಾದವರು ಉಪಸ್ಥಿತರಿದ್ದರು.

ಸಚಿನ್ ಕಾಮತ್ ಸ್ವಾಗತಿಸಿದರು.  ಇಮಾಮ್ ಸರ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಸೆಫ್ ಗೋನ್ಸಾಲಿಸ್ ವಂದಿಸಿದರು.  ಸಭಾ ಕಾರ್ಯಕ್ರಮ ಮುಗಿದ ಬಳಿಕ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯವರಿಂದ ನೃತ್ಯ ಕಾರ್ಯಕ್ರಮ ಜರುಗಿತು.

Share This
300x250 AD
300x250 AD
300x250 AD
Back to top