ಯಲ್ಲಾಪುರ: ಮೀನು ಹಿಡಿಯಲು ಹೋದ ತಂದೆ, ಮಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೇಡ್ತಿ ನದಿಯಲ್ಲಿ ನಡೆದಿದೆ.
ತಾಲೂಕಿನ ಮಂಚಿಕೇರಿ ಸಮೀಪದ ಹಳ್ಳಿಗದ್ದೆಯ ಖಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21) ಮೃತರು. ಇವರಿಬ್ಬರೂ ಬೇಡ್ತಿ ನದಿಯಲ್ಲಿ ಮೀನು ಹಿಡಿಯಲು ಗುರುವಾರ ಸಂಜೆ ಹೋದವರು ಮರಳಿ ಬಂದಿರದ ಕಾರಣ ಆತಂಕಗೊಂಡ ಕುಟುಂಬದವರು ಹುಡುಕಾಟ ಆರಂಭಿಸಿದ್ದರು.
ಶುಕ್ರವಾರ ಬೆಳಗ್ಗೆ ಬೇಡ್ತಿ ನದಿ ತೀರದಲ್ಲಿ ಅವರ ಬೈಕ್, ಚಪ್ಪಲಿ ಹಾಗೂ ಮೊಬೈಲ್ ಕಂಡು ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ನದಿಯಲ್ಲಿ ಶೋಧಿಸಿದಾಗ ಅಪ್ಪೆಕೊಡಿ ಬಳಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನಲ್ಲಿ ಮುಳುಗಿ ತಂದೆ,ಮಗನ ದುರ್ಮರಣ
