Slide
Slide
Slide
previous arrow
next arrow

ಫೆ.10ಕ್ಕೆ ಅಳ್ಳಿಮಕ್ಕಿಯಲ್ಲಿ ‘ಆಲೆಮನೆ ಹಬ್ಬ’

300x250 AD

ಸಿದ್ದಾಪುರ : ತಾಲೂಕಿನ ಕ್ಯಾದಗಿ ಸಮೀಪದ ಅಳ್ಳಿಮಕ್ಕಿಯಲ್ಲಿ ಫೆ.10, ಶನಿವಾರ ಆಲೆಮನೆ ಹಬ್ಬ ನಡೆಯಲಿದೆ. ಸ್ಥಳೀಯ ಮುಖಂಡರಾದ ದಿನೇಶ್ ವಿ. ನಾಯ್ಕ್, ಲೋಪಗೋಡ್, ಕಮಲಾಕರ ನಾಯ್ಕ್ ಹಂದಿಮನೆ ಹಾಗೂ ಊರ ನಾಗರಿಕರ ಸಹಯೋಗದಲ್ಲಿ  ಆಲೆಮನೆ ಹಬ್ಬ (ಹಾಲು ಕುಡಿಯಲು ಉಚಿತ ) ಕಾರ್ಯಕ್ರಮ ಆಯೋಜಿಸಿದ್ದಾರೆ. ಮೊದಲೆಲ್ಲ ತಾಲೂಕಿನ ಬಹು ಭಾಗಗಳಲ್ಲಿ ಆಲೆಮನೆಗಳು ನಡೆಯುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯುವವರ ಸಂಖ್ಯೆ ಕಡಿಮೆ ಆಗಿದ್ದು ಆಲೆಮನೆಗಳು ಎಲ್ಲೋ ಅಲ್ಲಿ ಇಲ್ಲಿ ನಡೆಯುತ್ತಿವೆ, ಬೇಸಿಗೆ ಬಂತೆಂದರೆ ಆಲೆಮನೆಗಳು ನಡೆಯುತ್ತಿದ್ದವು ಕಬ್ಬಿನ ಹಾಲು ಕುಡಿಯಲು ಅವಕಾಶಗಳು ಜನರಿಗೆ ಸಿಗುತ್ತಿದ್ದವು ಆದರೆ ಈಗ ಕಬ್ಬಿನ ಹಾಲು ಕುಡಿಯಲು ಜನ ಬಯುಸುತ್ತಿದ್ದು ಅವಕಾಶಗಳು ಕಡಿಮೆ ಆಗಿರುವುದನ್ನು ಮನಗಂಡು  ಕಬ್ಬಿನ  ಹಾಲು ಕುಡಿಯಲು ಮುಕ್ತ ಅವಕಾಶ ಕಲ್ಪಿಸಿದ್ದೇವೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮದ್ಯಾಹ್ನ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿTel:+919448152178, Tel:+919482559922 ನಂಬರ್ ಗೆ ಸಂಪರ್ಕಿಸಲು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top