ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದಿಂದ ಉತ್ತರಕನ್ನಡ ಜಿಲ್ಲೆಯ ತಾಲೂಕಿನ ದೊಡ್ನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಪರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀಮತಿ ಜಯಂತಿ ಪಿ. ಜೋಗಿ ಇವರಿಗೆ ಕಲ್ಯಾಣ ಸಂಘದ ಇಡಿಗಂಟು ಯೋಜನೆಯ ಅಡಿಯಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ದೊಡ್ನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ ನಿವೃತ್ತಿ ಹೊಂದಿದ ಹಾಲು ಪರೀಕ್ಷಕಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ, ರೂ.80,000/- ಮೊತ್ತದ ಚೆಕ್‌ನ್ನು ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ, ದೊಡ್ನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಪರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀಮತಿ ಜಯಂತಿ ಪಿ ಜೋಗಿ, ತಾರಗೋಡ ಸಂಘದ ಹಾಲು ಪರೀಕ್ಷಕರಾದ ನಾಗೇಂದ್ರ ಎಂ ಹೆಗಡೆ, ಮುಖ್ಯ ಕಾರ್ಯನಿರ್ವಾಹಕರಾದ ನಾಗಾನಂದ ಆರ್ ಹೆಗಡೆ, ಹಾಗೂ ಅಗಸಾಲ ಬೊಮ್ಮನಳ್ಳಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತ ದುರದೃಷ್ಟವಶಾತ್ ಅಕಾಲಿಕ ಮರಣ ಹೊಂದಿದ ಭಾಸ್ಕರ ಹೆಗಡೆ ಅವರುಗಳು ಯಾವುದೇ ಫಲಾಪೇಕ್ಷೆಯಲ್ಲದೇ, ಪ್ರಾಮಾಣಿಕತೆಯಿಂದ ಸಂಘದ ಏಳಿಗೆಗೆ ಶ್ರಮ ವಹಿಸಿ ತಮ್ಮ ನಿಸ್ವಾರ್ಥ ಸೇವೆಯಿಂದ ಹಾಲು ಸಂಘದಲ್ಲಿ ಅನೇಕ ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ಹೊತ್ತು ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು. ಮೊದಲೆಲ್ಲಾ ಒಬ್ಬ ಹಾಲು ಸಂಘದ ಕಾರ್ಯದರ್ಶಿ ಸೇವೆಯಿಂದ ನಿವೃತ್ತಿ ಹೊಂದಿದರೆ, ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಮರಣ ಹೊಂದಿದರೆ, ಅಪಘಾತಕ್ಕೊಳಗಾದರೆ, ಅಪಘಾತದಿಂದ ಮರಣ ಹೊಂದಿದರೆ, ಈ ಮೊದಲು ಒಕ್ಕೂಟದಿಂದಾಗಲೀ ಅಥವಾ ಸರ್ಕಾರದಿಂದಾಗಲೀ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿರಲಿಲ್ಲ ಆದರೆ ಇದೀಗ ನಮ್ಮ ಒಕ್ಕೂಟದ ಕಲ್ಯಾಣ ಸಂಘದಿಂದ ಹಾಲು ಸಂಘಗಳ ಸಿಬ್ಬಂದಿಯ ಕ್ಷೇಮಾಭಿವೃದ್ಧಿಗಾಗಿ ಸಾಧ್ಯವಾದಷ್ಟು ಇಡಿಗಂಟು ಎಂಬ ಯೋಜನೆಯ ಅಡಿಯಲ್ಲಿ ಸಹಾಯ ಪಡೆಯಬಹುದಾಗಿದೆ ಎಂದರು.
ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಗಾನಂದ ಆರ್ ಹೆಗಡೆ, ಹಾಲು ಪರೀಕ್ಷಕರಾದ ನಾಗೇಂದ್ರ ಎಂ. ಹೆಗಡೆ ಇವರುಗಳಿಗೆ ತಲಾ ರೂ. ರೂ.1,40,000/-, ರೂ.77,500/- ಗಳ ಮೊತ್ತದ ಚೆಕ್‌ನ್ನು, ಭಾವಿಕೈ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಪರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೇಶವ ಕೊಡಿಯಾ ಇವರಿಗೆ ರೂ. 90,000/- ಮೊತ್ತದ ಚೆಕ್‌ನ್ನು, ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಿಮ್ಮಾಣಿ ಹೆಗಡೆ ಇವರಿಗೆ ರೂ. 1,05,000/-, ಹಾಗೂ ಅಗಸಾಲ ಬೊಮ್ಮನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ ಹೆಗಡೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಕಾರಣ ಮೃತರ ಪತ್ನಿಯಾದ ಶ್ರೀಮತಿ ರೇಖಾ ಭಾಸ್ಕರ ಹೆಗಡೆ ಅವರಿಗೆ ಕಲ್ಯಾಣ ಸಂಘದಿಂದ ಇಡಿಗಂಟು ಯೋಜನೆಯ ಅಡಿಯಲ್ಲಿ ರೂ. 1,05,000/- ಮೊತ್ತದ ಚೆಕ್‌ನ್ನು ಅಗಸಾಲ ಬೊಮ್ಮನಳ್ಳಿ, ಭಾವಿಕೈ, ಹೆಗಡೆಕಟ್ಟಾ ಹಾಗೂ ತಾರಗೋಡ ಸಂಘಗಳಿಗೆ ಭೇಟಿ ನೀಡಿ ನಿವೃತ್ತಿ ಹೊಂದಿದ ಸಂಘದ ಸಿಬ್ಬಂಧಿಗಳಿಗೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಸಂಘದ ಸಿಬ್ಬಂಧಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ವಿತರಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಸಹಕಾರ ದೊಡ್ನಳ್ಳಿ ಹಾಲು ಸಂಘದ ಅಧ್ಯಕ್ಷರಾದ ಉಮೇಶ ಹೆಗಡೆ, ಆಡಳಿತ ಮಂಡಳಿ ಸದಸ್ಯರಾದ ಶ್ರೀಪಾದ ಹೆಗಡೆ, ಸಚಿನ್ ಭಟ್, ಸತ್ಯನಾರಾಯಣ ಭಟ್, ಕಾರ್ಯದರ್ಶಿ ಮಮತಾ ಸಂಪಗೋಡ, ಭಾವಿಕೈ ಹಾಲು ಸಂಘದ ಅಧ್ಯಕ್ಷರಾದ ನರಸಿಂಹ ಭಟ್, ತಾರಗೋಡ ಹಾಲು ಸಂಘದ ಅಧ್ಯಕ್ಷರಾದ ನಾರಾಯಣ ಹೆಗಡೆ, ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಅಗಸಾಲ ಬೊಮ್ಮನಳ್ಳಿ ವಿಶ್ವನಾಥ ಹೆಗಡೆ, ಕಾರ್ಯದರ್ಶಿ ಮಮತಾ ಭಟ್, ಹೆಗಡೆಕಟ್ಟಾ ಹಾಲು ಸಂಘದ ಅಧ್ಯಕ್ಷರಾದ ಮಂಜುನಾಥ ಹೆಗಡೆ, ಕಾರ್ಯದರ್ಶಿ ಶ್ರೀರಾಮ ಹೆಗಡೆ, ವಿಸ್ತರಣಾಧಿಕಾರಿ ಮೌನೇಶ ಸೋನಾರ, ವಿಸ್ತರಣಾ ಸಮಾಲೋಚಕರುಗಳಾದ ಜಯಂತ ಪಟಗಾರ, ಅಭಿಷೇಕ ನಾಯ್ಕ ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.