ದಾಂಡೇಲಿ : ನಗರದ ಬಸವೇಶ್ವರನಗರದಲ್ಲಿರುವ ಶ್ರೀ.ಅಂಬಾಭವಾನಿ ದೇವಸ್ಥಾನದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ವರ್ಧಂತಿ ಉತ್ಸವವನ್ನು ಫೆ.22 ರಿಂದ ಫೆ.25 ರವರೆಗೆ ಹಮ್ಮಿಕೊಳ್ಳಲಾಗಿದೆ.
ಫೆ.22 ರಂದು ಸಂಜೆ 4 ಗಂಟೆಗೆ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಿಂದ ವಾದ್ಯ ಮೇಳಗಳ ಜೊತೆ ಅಂಬಾಭವಾನಿ ದೇವಸ್ಥಾನದ ಗೋಪುರದ ಕಳಸವನ್ನು ಭವ್ಯ ಶೋಭಾಯಾತ್ರೆಯ ಮೂಲಕ ತರಲಾಗುವುದು.
ಫೆ.23 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳಾದ ಗಣ ಹೋಮ,ಫಲ ಪ್ರಾರ್ಥನೆ, ಗುರು ಪ್ರಾರ್ಥನೆ, ನವಗ್ರಹ ಪೂಜೆ, ನವಗ್ರಹ ದಾನ, ಮಹಾ ಸಂಕಲ್ಪ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಫೆ.24 ರಂದು ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗುವ ಪೂಜಾ ಕಾರ್ಯಕ್ರಮದಲ್ಲಿ ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪ್ರತಿಷ್ಠಾ ದಿವಸ ಕರ್ಮಾಂಗ ಸುಲಗ್ನದಲ್ಲಿ ದೇವರ ಪ್ರತಿಷ್ಠೆ, ಪ್ರತಿಷ್ಠ ಕಲಶಾಭಿಷೇಕ , ಮಹಾಪೂಜೆ, ಪಂಚ ದುರ್ಗ ದೀಪ ಆರಾಧನೆ ಹಾಗೂ ಬ್ರಹ್ಮಕುಂಬ ಸ್ಥಾಪನೆ ಕಾರ್ಯ ನಡೆಯಲಿದೆ.
ಫೆ: 25 ರಂದು ಬೆಳಿಗ್ಗೆ ಗುರು ಗಣಪತಿ ಪೂಜೆ ಹಾಗೂ ಮಹಾ ಚಂಡಿಕಾಯಾಗ ಮತ್ತು ಇನ್ನಿತರ ಹೋಮ ಹವನಗಳು ನಡೆಯಲಿದೆ. ಅಂದು ಮಧ್ಯಾಹ್ನ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.
ಈ ಎಲ್ಲ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಂಬಾಭವಾನಿ ದೇವಿಯ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ
ಶ್ರೀಅಂಬಾಭವಾನಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.