Slide
Slide
Slide
previous arrow
next arrow

ಬಿಲ್ ಹಣ ಪಾವತಿಗೆ ಆಗ್ರಹ: ಗುತ್ತಿಗೆದಾರ ಸಂಘದಿಂದ ಪ್ರತಿಭಟನೆ

300x250 AD

ದಾಂಡೇಲಿ : ಗುತ್ತಿಗೆದಾರರ ಬಿಲ್‌ಗಳ ಹಣ ಪಾವತಿಸಲು, ಎಸ್.ಎಫ್.ಸಿ ವಿಶೇಷ ಅನುದಾನ ಬಿಡುಗಡೆ ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ದಾಂಡೇಲಿ ನಗರಸಭೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಖಜಾಂಚಿ ಕೆ ಸುಧಾಕರ್ ರೆಡ್ಡಿ, ದಾಂಡೇಲಿ ನಗರಸಭೆಯಲ್ಲಿ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆಗಳನ್ನು ಅನ್ಯಾಯವನ್ನು ಹಲವಾರು ಬಾರಿ ಪತ್ರದ ಮೂಲಕ ಹಾಗೂ ಮೌಖಿಕವಾಗಿ ನಗರಸಭೆಯ ಗಮನಕ್ಕೂ, ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಈವರೆಗೆ ಸಮಸ್ಯೆಗೆ ಪರಿಹಾರವನ್ನು ನೀಡಲಾಗಿಲ್ಲ. ನಗರಸಭೆಯ ಅಧೀನದಡಿ ಮಾಡಲ್ಪಟ್ಟ ಕಾಮಗಾರಿಗಳ ಹಣ ಪಾವತಿಯಾಗದೇ ಇರುವುದರಿಂದ ಗುತ್ತಿಗೆದಾರರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಗುತ್ತಿಗೆದಾರರನ್ನೇ ನಂಬಿರುವ ಕಾರ್ಮಿಕರಿಗೂ ಇದೀಗ ಸಂಕಷ್ಟ ಎದುರಾಗಿದೆ. ಎಸ್.ಎಫ್.ಸಿ ವಿಶೇಷ ಅನುದಾನದಡಿ ಮಾಡಲಾದ ಕೆಲಸಗಳು ಮುಗಿಸಿ ಎಂಟು ತಿಂಗಳಾದರೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಇ.ಎಂ.ಡಿ ಮೊತ್ತವನ್ನು ವಾಪಸ್ ನೀಡಲು ವಿಳಂಭ ಮಾಡಲಾಗುತ್ತಿದೆ. ಕಾಮಗಾರಿಯ ಸ್ಥಳ ತೋರಿಸಲು ವಿಳಂಭ ಮಾಡಲಾಗುತ್ತಿದೆ. ಅಂದಾಜು ಪತ್ರಿಕೆ ಮಾಡುವಾಗ ಸರಿಯಾಗಿ ಸ್ಥಳ ನೋಡದೆ ಕಾಮಗಾರಿಯ ಟೆಂಡರ್ ಅನ್ನು ಕರೆಯುತ್ತಾರೆ. ಆದರೆ ಆಮೇಲೆ ಅಲ್ಲಿ ಕೆಲಸ ಮಾಡಲು ಸ್ಥಳಾವಕಾಶ ಇರುವುದಿಲ್ಲ. ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯದೆ ಟೆಂಡರ್ ಕರೆಯುವುದರಿಂದ ಗುತ್ತಿಗೆದಾರರಿಗೆ ಬಿಲ್ ಬಟವಾಡೆ ಮಾಡಲು ತಾಂತ್ರಿಕ ಸಮಸ್ಯೆಗಳು ಬರುತ್ತಿದೆ ಇದರಿಂದ ಬಿಲ್ ಪಾವತಿ ವಿಳಂಬವಾಗುತ್ತಿದೆ. ನಗರಸಭೆ ಅನುದಾನಕ್ಕಿಂತ ಹೆಚ್ಚಿನ ಪ್ರಮಾಣದ ಕೆಲಸಗಳನ್ನು ಕರೆಯುವುದರಿಂದ ಗುತ್ತಿಗೆದಾರರ ಬಿಲ್ ಪಾವತಿಸಲು ಆಗುತ್ತಿಲ್ಲ. ಕಾಮಗಾರಿ ಮುಗಿದ ನಂತರ ಭದ್ರತಾ ಠೇವಣಿಯನ್ನು ವಾಪಸ್ ನೀಡಲು ತಿಂಗಳುಗಟ್ಟಲೆ ವಿಳಂಭ ಮಾಡಲಾಗುತ್ತಿದೆ. ಹೀಗೆ ಅನೇಕ ಸಮಸ್ಯೆಗಳಿಂದ ಗುತ್ತಿಗೆದಾರರು ಬಸವಳಿದಿದ್ದಾರೆ. ಈ ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದ ಸುಧಾಕರ ರೆಡ್ಡಿಯವರು ಒಂದಾನು ವೇಳೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಶಾಸಕರ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ನಂತರ ವಿವಿಧ ಬೇಡಿಕೆಗಳ ಮನವಿಯನ್ನು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಿಗೆ ಕೆನರಾ ಲೋಕಪಯೋಗಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಲಮಾಣಿಯವರು ನೀಡಿದರು. ಮನವಿ ಸ್ವೀಕರಿಸಿದ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಎಸ್.ಜಿ.ರಜಪೂತ್, ಆರ್.ಸಿ.ದೇವಾನಂದ್, ಎಸ್.ಎನ್.ಪಡುಕೋಣೆ, ಟಿ.ಆನಂದ ಮಾಧವನ್, ಆರ್.ಡಿ.ಜನ್ನು, ಸುಬ್ರಹ್ಮಣ್ಯ, ಅವಿನಾಶ್ ಘೋಡ್ಕೆ, ಬಸವರಾಜ ಮುರಡಿ, ದೇವೇಂದ್ರ ಹನುಮಶೆಟ್ಟರ್, ಪ್ರದೀಪ್ ಶೆಟ್ಟಿ, ಪ್ರದೀಪ್ ಗವಸ‌, ರಿಜಾಯ್ ಬಿಡಿಕರ್, ಮುಂಜುನಾಥ್ ಮುರ್ಗೇಶ್ ಹಾಗೂ ಸಂಘದ ಸದಸ್ಯರು, ನ್ಯಾಯವಾದಿ ಆರ್.ವಿ.ಗಡಪ್ಪನವರ್ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top