Slide
Slide
Slide
previous arrow
next arrow

ಮಕ್ಕಳಲ್ಲಿನ ಪ್ರತಿಭೆಯನ್ನು ಶಿಕ್ಷಕರು ಗುರುತಿಸಬೇಕು: ರಾಧಾಕೃಷ್ಣ ಭಟ್

300x250 AD

ಭಟ್ಕಳ: ಶಿಕ್ಷಕರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಕಾರ್ಯವನ್ನು ಮಾಡಬೇಕು ಎಂದು ಪತ್ರಕರ್ತ ರಾಧಾಕೃಷ್ಣ ಭಟ್ಟ ಹೇಳಿದರು.

ಅವರು ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಭಟ್ಕಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಭಟ್ಕಳ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ಮತ್ತು ಶೈಕ್ಷಣಿಕ ವಿಕಸನ ಕಾರ್ಯಾಗಾರವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ದೇಶವನ್ನು ರೂಪಿಸುವ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುವವರು, ಒಂದು ಮಗುವು ಶಾಲೆಯಲ್ಲಿ ಉತ್ತಮವಾದ ವಿದ್ಯೆಯನ್ನು ಕಲಿತರೆ ಅದು ಮುಂದೆ ಸಮಾಜಕ್ಕೆ ನಮ್ಮ ದೇಶಕ್ಕೆ ಆಸ್ತಿಯಾಗುತ್ತದೆ. ವಿದ್ಯಾರ್ಥಿಗಳು ಚಿಕ್ಕವರಿಂದಲೇ ಶಿಕ್ಷಕರನ್ನು ಅವಲಂಬಿಸಿರುವುದರಿಂದ ಅವರ ಬುದ್ದಿಮತ್ತೆ, ಆಸಕ್ತಿ ಕ್ಷೇತ್ರವನ್ನು ಬಹು ಸುಲಭವಾಗಿ ಶಿಕ್ಷಕರು ಗುರುತಿಸುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಟ್ಟರೆ ಅವರು ಮುಂದೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂದರಲ್ಲದೇ ಶಿಕ್ಷಕರು ಒಂದು ವಿದ್ಯಾರ್ಥಿಯನ್ನು ಎಷ್ಟು ಎತ್ತರಕ್ಕೆ ಕೂಡಾ ಬೆಳೆಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದೂ ಹೇಳಿದರು.

ಹಿಂದೆ ಶಿಕ್ಷಕರಾಗುವ ಅವಕಾಶ ಸುಲಭವಾಗಿ ದೊರೆಯುತ್ತಿದ್ದರೆ ಇಂದು ಶಿಕ್ಷಕರಾಗುವ ಕೆಲಸ ತುಂಬಾ ಸ್ಪರ್ಧಾತ್ಮಕವಾಗಿದೆ. ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಶಿಕ್ಷಕರಾಗುವ ನೀವು ಇದೇ ವೃತ್ತಿಯಲ್ಲಿ ತೃಪ್ತಿ ಕಂಡರೂ ಕೂಡಾ ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ದೇಶ ಸೇವೆಯತ್ತ ಕೂಡಾ ಮುಖ ಮಾಡುವಂತೆ ಸಲಹೆ ನೀಡಿದರು. ಅತ್ಯಂತ ಗೌರವಯುತವಾದ ಶಿಕ್ಷಕ ಹುದ್ದೆಯಲ್ಲಿ ವ್ಯಕ್ತಿಯ ಜೀವನ ರೂಪಿಸುವ ಕಾರ್ಯ ನಿಮ್ಮಿಂದಾಗಲೀ, ಸಮಾಜಕ್ಕೆ, ದೇಶಕ್ಕೆ ಉತ್ತಮ ಪ್ರಜೆಯನ್ನು ರೂಪಿಸುವ ಕಾರ್ಯವಾಗಲೀ ಎಂದೂ ಅವರು ಹಾರೈಸಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ವಹಿಸಿದ್ದರು. ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಟ್ಕಳ ಶಾಖೆಯ ಅಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಿಕ್ಷಕರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು. ಅನೇಕ ಜಟಿಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸರಕಾರ ವಿವಿಧ ಕಾರ್ಯಗಳನ್ನು ಶಿಕ್ಷಕರಿಗೆ ವಹಿಸುವುದನ್ನು ಕೂಡಾ ನಮ್ಮ ಹೋರಾಟದ ಫಲವಾಗಿ ಕಡಿಮೆಗೊಳಿಸಿದ ಎಂದ ಅವರು ಚುನಾವಣಾ ಕಾರ್ಯದಲ್ಲಿಯೂ ಕೂಡಾ ಶಿಕ್ಷಕರನ್ನೇ ಅವಲಂಬಿಸುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ಸಂನ್ಮೂಲ ವ್ಯಕ್ತಿಗಳಾಗಿ ಶ್ರೀ ಗುರು ವಿದ್ಯಾಧಿರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶ್ಯಾನುಭಾಗ, ಕುಮಟಾ ಡಯಟ್‌ನ ಸಂತೋಶ ಶ್ರೇಷ್ಟಿ, ಆನಂದ ಆಶ್ರಮ ಕಾನ್ವೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿನುತಾ, ಸೈಂಟ್ ಥಾಮಸ್ ಪ್ರೌಢ ಶಾಲೆ ಶಿರಾಲಿಯ ಶಿಕ್ಷಕಿ ನೇಹಾ ಸಿಜೊ, ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಡಿ.ರಫೀಕ್ ಮುಂತಾದವರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಶಾಲೆಯ ಆಯ್ದ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳು ಅಗತ್ಯದ ಮಾಹಿತಿ, ಮಾರ್ಗದರ್ಶನ ನೀಡಿದರು.

Share This
300x250 AD
300x250 AD
300x250 AD
Back to top