Slide
Slide
Slide
previous arrow
next arrow

ಜಾತ್ರೆಯಲ್ಲಿ ಅಲೆಮಾರಿ ಜನಾಂಗಕ್ಕಾಗಿ ಅಂಗಡಿಗಳನ್ನು ಮೀಸಲಿಡಿ: ಕೃಷ್ಣ ಬಳೆಗಾರ

300x250 AD

ಶಿರಸಿ: ವಿಶ್ವ ವಿಖ್ಯಾತ ಶ್ರೀ ಮಾರಿಕಾಂಬಾ ಜಾತ್ರೆಯು ಪ್ರಾರಂಭವಾಗುತ್ತಿದ್ದು, ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಮೀಸಲಿಟ್ಟ ಜಾಗಕ್ಕೆ ಹರಾಜು ಪ್ರಕ್ರಿಯೆ ನಡೆಸದೆ (ಹಕ್ಕಿಪಿಕ್ಕಿ) ಅಲೆಮಾರಿ ಜನಾಂಗದವರಿಗೆ 100 ಅಂಗಡಿಗಳನ್ನು ಮೀಸಲಿಡಬೇಕು ಎಂದು ಅಲೆಮಾರಿ ಅರೆಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಭಿವೃದ್ದಿ ಕೋಶದ ನಾಮ ನಿರ್ದೇಶಿತ ಸದಸ್ಯ ಕೃಷ್ಣ ಬಳೆಗಾರ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಹಾಯುಕ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಜಾತ್ರೆಗೆ ದೇವಿಗದ್ದುಗೆಯ ಸುತ್ತ ಮುತ್ತಲಿನ ಜಾಗವನ್ನು ನಗರ ಸಭೆಯಿಂದ ಹರಾಜಿನ ಮೂಲಕ ನೀಡುತ್ತಾರೆ. ಹಿಂದಿನಿಂದಲೂ ಶಿರಸಿ ನಗರದ ಶಿವಾಜಿ ಚೌಕ್, ಮಿರ್ಜಾನ ಪೆಟ್ರೊಲ್ ಬಂಕ್, ಮುಂಭಾಗ ಹಾಗು ಹಿಂಭಾಗ ಪೋಸ್ಟ ಆಫೀಸ ಮುಂಭಾಗದ ಜಾಗೆಗಳನ್ನು ಅಲೆಮಾರಿ ಅರೆಅಲೆಮಾರಿ (ಹಕ್ಕಿಪಿಕ್ಕಿ) ಜನಾಂಗದವರಿಗೆ ಕರಕುಶಲ ವಸ್ತುಗಳ ಮಾರಾಟಕ್ಕೆ ನೀಡುತ್ತಿದ್ದು ಅವರು ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿತ್ತು. (ಹಕ್ಕಿಪಿಕ್ಕಿ) ಅಲೆಮಾರಿ, ಅರೆಅಲೆಮಾರಿ ಜನಾಂಗದವರು ಇವರು ಅತಿ ಹಿಂದುಳಿದವರಾಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಅವರಿಗೆ ಯಾವುದೇ ಆದಾಯದ ಮೂಲ ಇರುವುದಿಲ್ಲ. ದಿನ ದುಡಿದು ತಿನ್ನುವವರಾಗಿದ್ದು, ಕಳೆದ ಜಾತ್ರೆಯ ಸಂದರ್ಭದಲ್ಲಿ (ಹಕ್ಕಿಪಿಕ್ಕಿ) ಅಲೆಮಾರಿ ಅರೆಅಲೆಮಾರಿ ಜನಾಂಗದವರ ಅಂಗಡಿಗಳನ್ನು ಕಿತ್ತು ಹಾಕಿ ನಗರಸಭೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದರು. ಪೋಲಿಸರ ಉಪಸ್ಥಿತಿಯಲ್ಲಿ (ಹಕ್ಕಿಪಿಕ್ಕಿ) ಅಲೆಮಾರಿ ಅರೆಅಲೆಮಾರಿ ಜನಾಂಗದವರ ಮೇಲೆ ಹಲ್ಲೆ ಮಾಡಿ ಅವರ ಅಂಗಡಿಗಳನ್ನು ರಾತ್ರೋರಾತ್ರಿ ಕಿತ್ತು ವಾಹನದಲ್ಲಿ ಸಾಗಿಸಲಾಗಿತ್ತು. ಈ ಕುರಿತು ಸುದ್ದಿವಾಹಿನಿಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಕುರಿತು ಸಾಮಾಜಿಕ ಹೋರಾಟಗಾರರು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಮೇಲೆ (ಹಕ್ಕಿಪಿಕ್ಕಿ) ಅಲೆಮಾರಿ ಜನಾಂಗದವರಿಗೆ ಕೇವಲ ಶಿವಾಜಿ ಚೌಕ್ ಜಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಇಡಲು ಜಾಗ ನೀಡಲಾಗಿತ್ತು. ಪೋಸ್ಟ್ ಆಫಿಸು ಎದುರು, ಮಿರ್ಜಾನ ಪೆಟ್ರೋಲ್ ಬಂಕ್ ಮುಂಭಾಗ ಹಾಗು ಹಿಂಭಾಗ ಆಸುಪಾಸು ಜಾಗಗಳನ್ನು (ಹಕ್ಕಿಪಿಕ್ಕಿ) (ಪ.ಜಾತಿ ಪ. ಪಂಗಡ) ಜನಾಂಗದವರಿಗೇ ನೀಡಬೇಕು ಹಾಗೂ ಅಧಿಕಾರಿಗಳು ಪೋಲಿಸರಿಂದ ದೌರ್ಜನ್ಯವಾಗದಂತೆ ನೋಡಿಕೊಳ್ಳಬೇಕೆಂದು ಕೋರಿದ್ದಾರೆ‌.

300x250 AD
Share This
300x250 AD
300x250 AD
300x250 AD
Back to top