Slide
Slide
Slide
previous arrow
next arrow

‘ಸೇವಾದಳ ಶತಮಾನೋತ್ಸವ’ ಆಚರಣೆ

300x250 AD

ಶಿರಸಿ: “ಸೇವಾದಳ ಶತಮಾನೋತ್ಸವ” ಆಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ ಶಿರಸಿ ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಭಾರತ ಸೇವಾದಳ ತಾಲೂಕಾ ಸಮಿತಿ ಅವರ ಸಹಯೋಗದೊಂದಿಗೆ ನಡೆದ ಶಿಕ್ಷಕರಿಗಾಗಿ ನಡೆದ ಸಹಾಯಕ, ಯೋಗ, ನೈತಿಕ, ದೈಹಿಕ ಶಿಕ್ಷಣ ತರಬೇತಿ ಶಿಬಿರವು ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಸಂಪನ್ನಗೊಂಡಿತು.
ಪ್ರಾಂಶುಪಾಲರು ಡಯಟ್ ಎಂ.ಎಸ್.ಹೆಗಡೆ ಮಾತನಾಡಿ, ರಾಷ್ಟ್ರ ಧ್ವಜಾರೋಹಣ ಮಾಡುವ ಸುಯೋಗ ನನಗೆ ಒದಗಿದೆ. ಸಾಮರಸ್ಯ, ಭಾವೈಕ್ಯತೆ ಸಾರುವ ಭಾರತ ಸೇವಾದಳದ ಶಿಕ್ಷಣ ಪಡೆದ ನೀವು ಯಥಾವತ್ತಾಗಿ ಶಾಲೆಯಲ್ಲಿ ಅಳವಡಿಸಿಕೊಳ್ಳಿ ಎಂದು ಶುಭ ನುಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ವಿ. ಎಸ್. ನಾಯಕ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮವು ಪ್ರಾರಂಭಗೊಂಡಿತು. ಸಮಾರಂಭದಲ್ಲಿ , ಭಾರತ ಸೇವಾದಳ ದಳಪತಿ ಕಾಶಿನಾಥ ಹಂದ್ರಾಳ ಸುಂದರವಾದ ಭಾವೈಕ್ಯತೆಯ ಭಕ್ತಿಗೀತೆಯನ್ನು ಹಾಡಿ, ಶಿಬಿರವನ್ನು ನಡೆಸುವುದು ಸವಾಲಾಗಿದೆ. ಆದರೆ ಶಿರಸಿಯಲ್ಲಿ ಇಂಥಹ ತರಬೇತಿಯನ್ನು ಆದರ್ಶಪ್ರಾಯವಾಗಿ ನಿರ್ವಹಿಸುತ್ತಾ ಬಂದಿರುತ್ತದೆ. ಆದರ್ಶ ಪ್ರಾಯರಾದ ಶಾಸ್ತ್ರೀಜಿ, ಗಾಂಧೀಜಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ದೇಶಸೇವೆಯನ್ನು ಮಾಡೋಣ ಎಂದರು. ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀಮತಿ ಜ್ಯೋತಿಪ್ರಭಾ, ಹಳಿಯಾಳ ಪ್ರಶಸ್ತಿ ಪತ್ರವನ್ನು ವಿತರಿಸಿದರು. ವಿ.ಎಸ್.ನಾಯಕ ಮಾತನಾಡುತ್ತಾ ನಮ್ಮ ಅಂಕೋಲಾ ಸ್ವಾತಂತ್ರ್ಯ ಹೋರಾಟಗಾರರ ನಾಡು. ಜನಸಂಖ್ಯೆಯಲ್ಲಿ 2ನೇ ದೊಡ್ಡ ರಾಷ್ಟ್ರ. ಆದರೆ ಅಭಿವೃದ್ಧಿಯಲ್ಲಿ ನಂ.1 ರಾಷ್ಟ್ರ ಆಗಿರುತ್ತದೆ. ಛಲದೊಂದಿಗೆ ಕಾರ್ಯನಿರ್ವಹಿಸಬೇಕು. ಕೈಜೋಡಿಸುವ ಕೆಲಸ ಮಾಡಿರಿ. ಕಾಲೆಳೆಯುವ ಕೆಲಸ ಮಾಡಬಾರದು. ನಿಮ್ಮ ಶಾಲೆಯ ಮಗು ನಿಮ್ಮದಾಗಿರುತ್ತದೆ. ಅದಕ್ಕೆ ಮೌಲ್ಯಯುತವಾದ ಶಿಕ್ಷಣ ನೀಡಿ “ಶಿಲೆ ಭಾರವುಳ್ಳ ಶಿಕ್ಷಣವು ಪುಷ್ಪಭಾರವುಳ್ಳ ಲತೆಯಂತೆ ಶೋಭಾಯಮಾನ” ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಪಿ. ಬಸವರಾಜ ಹಾಗೂ ಭಾರತ ಸೇವಾದಳ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಪಟಗಾರ, ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ, ಶಿರಸಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ ಪಟಗಾರ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ನಾಲ್ಕು ದಿನಗಳಲ್ಲಿ ಕಲಿತಿರುವ ಎಲ್ಲಾ ಪ್ರಕಾರದ ಕವಾಯತುಗಳನ್ನು ಸಾಮೂಹಿಕವಾಗಿ, ಬ್ಯಾಂಡ್‌ವಾದನದೊAದಿಗೆ ಪ್ರದರ್ಶನ ಮಾಡಿ ತೋರಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಉಪನಿರ್ದೇಶಕರು ಮಾತನಾಡುತ್ತಾ ನಿಮ್ಮ ಕ್ರಿಯಾಶೀಲತೆ, ಭಾಗವಹಿಸುವಿಕೆ ನೋಡಿದರೆ ನನಗೆ ತುಂಬಾ ಸಂತೋಷ. ನಿಮ್ಮ ಈ ಕ್ರಿಯಾಶೀಲತೆ ಇದೇ ರೀತಿ ನಿರಂತರತೆಯನ್ನು ಕಾಯ್ದುಕೊಳ್ಳಿರಿ. ಭಾರತ ಸೇವಾದಳದ ಧ್ಯೇಯೋದ್ದೇಶವನ್ನು, ತತ್ವವನ್ನು ನಿಮ್ಮ ವೈಯಕ್ತಿಕ ಜೀವನದಲ್ಲೂ ಅಳವಡಿಸಿಕೊಳ್ಳಿರಿ ಎಂದರು. ಶ್ರೀ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಇವರು ಮಾತನಾಡುತ್ತಾ ಭಾರತ ಸೇವಾದಳ ಇಲ್ಲಿಂದ ಸಿಗಬೇಕಾದ ಎಲ್ಲ ಹಂತದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಪೂರ್ಣವಾಗಿ ಶ್ರಮಿಸುತ್ತೇವೆ. ಸೌಲಭ್ಯಗಳಿಗಾಗಿಯೇ ಕೆಲಸ ಮಾಡದೇ, ಸೇವೆಗಾಗಿ ಕೆಲಸ ಮಾಡಿರಿ ಎಂದರು.

300x250 AD

ಸ.ಹಿ.ಪ್ರಾ.ಶಾಲೆ ಕಂಚನಳ್ಳಿಯ ಶ್ರೀಮತಿ ಗೀತಾ ಶೆಟ್ಟಿ ಹಾಗೂ ಕೆ. ಜಿ.ಎಸ್.ಪಿ.ಎಸ್. ಚೌಡಳ್ಳಿಯ ಅನಿಲ್ ಎಸ್ ತಮ್ಮ ಅನಿಸಿಕೆಯನ್ನು ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರೋ. ಕೆ. ಎನ್. ಹೊಸಮನಿ, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ಶ್ರೀಮತಿ ಜ್ಯೋತಿಪ್ರಭಾ, ದೈಹಿಕ ಶಿಕ್ಷಣ ಪರಿವೀಕ್ಷಕರು ಹಳಿಯಾಳ, ತಾಲೂಕು ಸಮಿತಿ ಸದಸ್ಯರಾದ ಕೆ.ಎಸ್. ನಾಯ್ಕ,ಕೋಶಾಧ್ಯಕ್ಷ ಕುಮಾರ ನಾಯ್ಕ, ಪಿ. ಎನ್. ಜೋಗಳೇಕರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸುಧಾಮ ಪೈ, ಉದಯಕುಮಾರ ಹೆಗಡೆ, ಚಂದ್ರಕಾಂತ ತಳವಾರ, ಶ್ರೀಮತಿ ದಾಕ್ಷಾಯಣಿ ಕೊಡಿಯಾ, ಎಂ. ಎನ್. ಹೆಗಡೆ ಉಪಸ್ಥಿತರಿದ್ದರು. ಅಶೋಕ ಬಿ. ಭಜಂತ್ರಿ ಸ್ವಾಗತಿಸಿದರು. ರಾಮಚಂದ್ರ ಹೆಗಡೆ ವರದಿ ವಾಚಿಸಿದರು. ಉದಯಕುಮಾರ ಹೆಗಡೆ ನಿರೂಪಿಸಿದರು. ಕೋಶಾಧ್ಯಕ್ಷ ಕುಮಾರ ಎಸ್. ನಾಯ್ಕ ವಂದಿಸಿದರು. ಶಿಬಿರಾರ್ಥಿಗಳೆಲ್ಲರೂ ಸೇರಿ ಗುರುಗೌರವಾರ್ಪಣೆಯೊಂದಿಗೆ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಗುರುಕಾಣಿಕೆ ನೀಡಿದರು.
ಶಿಬಿರದಲ್ಲಿ ಧ್ವಜವಂದನೆಯನ್ನು ಸಮನ್ವಯಾಧಿಕಾರಿ ದಿನೇಶ ಶೇಟ್, ತಹಶೀಲ್ದಾರ ಶ್ರೀಧರ ಮುಂದಲಮನಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ. ಗಣೇಶ, ನೆರವೇರಿಸಿ ಶುಭಾಶಯಗಳನ್ನು ತಿಳಿಸಿದರು. ಉಪನ್ಯಾಸದಲ್ಲಿ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗೌರಿ ನಾಯ್ಕ ಆರೋಗ್ಯದ ವಿಚಾರವಾಗಿ ಮಾಹಿತಿ ನೀಡಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ ತಾರಿಕೊಪ್ಪ ದೈಹಿಕ ಶಿಕ್ಷಣ ಮತ್ತು ಅಭ್ಯಾಸ ವಿಷಯವಾಗಿ ಮಾಹಿತಿ ನೀಡಿದರು. ರಾಜಯೋಗಿನಿ ಬಿ.ಕೆ. ವೀಣಾಜಿ ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ಶಿಬಿರದಲ್ಲಿ ಭಾರತ ಸೇವಾದಳ ಮಾಹಿತಿ, ಡಾ. ನಾ.ಸು. ಹರ್ಡೀಕರ ರವರ ಜೀವನ ಚರಿತ್ರೆ, ನಾಯಕತ್ವ ಗುಣಗಳು, ರಾಷ್ಟ್ರಧ್ವಜದ ಮಾಹಿತಿ, ಬ್ಯಾಂಡ್ ವಾದನ, ಯೋಗ ಪ್ರಾಣಾಯಾಮ, ಸಲಕರಣೆ ಅಭ್ಯಾಸ, ಸಾಭಿನಯ ಗೀತೆ, ಸಾಮೂಹಿಕ ವ್ಯಾಯಾಮ, ಎರೊಬಿಕ್ಸ್ ಅಭ್ಯಾಸಗಳನ್ನು ಶಿಬಿರದಲ್ಲಿ ನೀಡಲಾಯಿತು. 106 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

Share This
300x250 AD
300x250 AD
300x250 AD
Back to top