Slide
Slide
Slide
previous arrow
next arrow

ಅಗಲಿದ ಶಾಂತಾರಾಮ ಹೆಗಡೆ: ಟಿ.ಎಸ್.ಎಸ್.ನಲ್ಲಿ ಶ್ರದ್ಧಾಂಜಲಿ ಸಭೆ

300x250 AD

ಶಿರಸಿ: ದಿ ತೋಟಗಾರ್ಸ ಕೋ- ಆಪರೇಟಿವ್ ಸೇಲ್ ಸೊಸೈಟಿ ಲಿ. ಶಿರಸಿ ಪ್ರಧಾನ ಕಛೇರಿಯಲ್ಲಿ ಫೆ.3,ಶನಿವಾರ ಮಧ್ಯಾಹ್ನ 3.30ಕ್ಕೆ ಅಗಲಿದ ಸಹಕಾರಿ ಧುರೀಣ ಹಾಗೂ ಟಿ.ಎಸ್.ಎಸ್. ನಿಕಟಪೂರ್ವ ಅಧ್ಯಕ್ಷರಾಗಿದ್ದ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ದೀಪ ಬೆಳಗಿಸಿ, ಮೌನಾಚರಣೆ ಮತ್ತು ಆಗಮಿಸಿದ ಅಭಿಮಾನಿಗಳು, ಸದಸ್ಯರು ಪುಷ್ಪ ನಮನ ಸಲ್ಲಿಸುವುದರೊಂದಿಗೆ ಸಂತಾಪ ಸೂಚಕ ಸಭೆಯನ್ನು ಪ್ರಾರಂಭಿಸಲಾಯಿತು.ಸಂಘದ ಉಪಾಧ್ಯಕ್ಷರಾದ ಎಂ.ಎನ್.ಭಟ್ಟ ತೋಟಿಮನೆ ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಂತಾರಾಮ ಹೆಗಡೆಯವರ ವೈಯಕ್ತಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಬದುಕು ಮತ್ತು ಕೊಡುಗೆಗಳ ಕುರಿತು ಸವಿಸ್ತಾರವಾಗಿ ಸಭೆಗೆ ಮನವರಿಕೆ ಮಾಡಿಕೊಟ್ಟರು. ಅಗಲಿದ ಮಾಜಿ ಅಧ್ಯಕ್ಷರೊಂದಿಗೆ ಒಡನಾಡಿದ ಕ್ಷಣಗಳನ್ನು ಸಭೆಗೆ ಅರುಹಿದರು. ಸಂಘದ ಎಲ್ಲ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು, ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ಟ, ಸಿಬ್ಬಂದಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕರ‍್ಯನಿರ್ವಾಹಕರು, ಸಂಘದ ಸದಸ್ಯರು, ಅಡಿಕೆ ವರ್ತಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಿರಸಿ ಪ್ರತಿನಿಧಿಗಳು, ಪತ್ರಕರ್ತರು, ಅಭಿಮಾನಿ ಬಳಗದ ಹಲವರು ಉಪಸ್ಥಿತರಿದ್ದರು.

ಸದಸ್ಯರ ವತಿಯಿಂದ ಶ್ರೀಧರ ಹೆಗಡೆ ಮುಂಡಿಗೇಸರ, ಮುರಳೀಧರ ಗುಡಿಗಾರ,ಶಿವಾಜಿ ವಿ ಗೌಡರ್ ಸಂತೊಳ್ಳಿ, ಪ್ರಭಾಕರ ರಾಮಚಂದ್ರ ಭಟ್ಟ ತಟ್ಟಿಕೈ, ಮಹಾಬಲೇಶ್ವರ ಆರ್ ಹೆಗಡೆ ಮತ್ತಿಹಳ್ಳಿ ಬಾಳೇಜಡ್ಡಿ, ಡಾ. ಕೃಷ್ಣಮೂರ್ತಿ ಭಟ್ಟ ಬೊಮ್ಮನಳ್ಳಿ ಹಾಗೂ ಬೈಪ್ ಸಂಸ್ಥೆಯ ಪ್ರತಿನಿಧಿಯಾದ ಮಹಾಬಲೇಶ್ವರ ಹೆಗಡೆ ಎಲ್ಲರೂ ಶಾಂತಾರಾಮ ಹೆಗಡೆ ಇವರ ವಿವಿಧ ಕ್ಷೇತ್ರಗಳ ಕೊಡುಗೆ ಜೀವನ ಆದರ್ಶಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು. ಸಹಕಾರ ಸಂಘಗಳ ಪ್ರತಿನಿಧಿಗಳಾದ ಗುರುಪಾದ ಹೆಗಡೆ ಬೊಮ್ಮನಳ್ಳಿ, ಎಸ್.ಎನ್. ಹೆಗಡೆ ದೊಡ್ನಳ್ಳಿ,ಭಾಸ್ಕರ ಹೆಗಡೆ ಕಾಗೇರಿ ಇವರುಗಳು ಶಾಂತಾರಾಮ ಹೆಗಡೆಯವರ ವ್ಯಕ್ತಿತ್ವ ಮಾರ್ಗದರ್ಶನ ಕುರಿತಾಗಿ ವಿಚಾರಗಳನ್ನು ಹಂಚಿಕೊಂಡು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ಸಂಘದ ಸಿಬ್ಬಂದಿಗಳಾದ ರವಿಚಂದ್ರ ಶ್ರೀಪತಿ ಹೆಗಡೆ ಹೊಸ್ಕೊಪ್ಪ, ಶ್ರೀಯುತರ ಆದರ್ಶಗಳ ಕುರಿತು ಮಾತನಾಡಿದರು.ಶ್ರೀಮತಿ ರಶ್ಮಿ ಹೆಗಡೆ ಸ್ವರಚಿತ ಕವನ ವಾಚಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಪ್ರೀತಿ ಭಟ್ಟ, ಪೂರ್ಣಿಮಾ ಹೆಗಡೆ, ಮಹಾಲಕ್ಷ್ಮಿ ಹೆಗಡೆ ಹಾಗೂ ಸಂಗಡಿಗರು ಭಗವದ್ಗೀತಾ ಶ್ಲೋಕ ಪಠಣ ಮತ್ತು ಶಾಂತಿ ಮಂತ್ರದೊಂದಿಗೆ ಅಗಲಿದ ಆತ್ಮಕ್ಕೆ ಗೌರವ ಸೂಚಿಸಿದರು. ಅಭಿಮಾನಿ ಗಣೇಶ ಖರೆ, ಬನವಾಸಿ ಕೈಯಿಂದ ಮೂಡಿಬಂದ ಶಾಂತಾರಾಮ ವಿ ಹೆಗಡೆ ಇವರ ರಂಗೋಲಿ ಗಮನ ಸೆಳೆಯುವಂತಿದ್ದು, ಅವರ ಕಲಾಕೌಶಲ್ಯವನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗೋಪಾಲ ಹೆಗಡೆ ಬೂದಿಮುರ್ಡು ಕಾರ್ಯಕ್ರಮ ನಿರೂಪಿಸಿದರು ಹಾಗೂ ಆಭಾರ ಮನ್ನಣೆ ನೆರವೇರಿಸಿದರು.

300x250 AD
Share This
300x250 AD
300x250 AD
300x250 AD
Back to top