Slide
Slide
Slide
previous arrow
next arrow

ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಯ ಬೇಲಿ: ಮಾರುಕಟ್ಟೆಗೆ ಬಾರದ ರೈತನ ಬೆಳೆ

300x250 AD

ಯಲ್ಲಾಪುರ: ಆನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ನಿರ್ಮಿಸಿ ಬೀಗ ಜಡಿದಿದ್ದಾರೆ. ಹೀಗಾಗಿ ತೋಟದಲ್ಲಿದ್ದ ಫಸಲನ್ನು ಮನೆಗೆ ತರಲಾಗದ ಪರಿಸ್ಥಿತಿಯಲ್ಲಿ ರೈತರಿದ್ದಾರೆ.

ತಟಗಾರ ಗ್ರಾಮದ ದೇವಸಕ್ಕೆ ತೆರಳಲು ಶೀಗೇಪಾಲ್-ದೇವಸ ಹಳ್ಳದ ಬದಿಯಿಂದ ಅನಾದಿಕಾಲದಿಂದಲೂ ಸಾರ್ವಜನಿಕ ರಸ್ತೆಯಿದೆ. ಈ ರಸ್ತೆ ಅಭಿವೃದ್ಧಿಗೆ ಗ್ರಾಮ ಪಂಚಾಯತದಿಂದ ಅನುದಾನ ಸಹ ಬಳಕೆಯಾಗಿದೆ. ಕಳೆದ ವರ್ಷ 15ನೇ ಹಣಕಾಸು ಯೋಜನೆ ಅಡಿ ರಸ್ತೆ ಅಗಲೀಕರಣ ಕೆಲಸ ಶುರುವಾದಾಗ ಸ್ಥಳೀಯರೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ವೇಳೆ ಒತ್ತಡ ತಂದು ರಸ್ತೆ ಅಭಿವೃದ್ಧಿ ಕೆಲಸಕ್ಕೆ ಅವರು ತಡೆ ಒಡ್ಡಿದ್ದರು. ಇದೀಗ ಸಾರ್ವಜನಿಕ ಓಡಾಟದ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಿ ಬೀಗ ಹಾಕಿದ್ದಾರೆ. ಇದರಿಂದ ಈ ರಸ್ತೆ ಮೂಲಕ ಕೃಷಿಭೂಮಿಗೆ ತೆರಳಬೇಕಿದ್ದ ನಾಗೇಂದ್ರ ಭಟ್ಟ ಹಾಗೂ ಅವರ ಕುಟುಂಬದವರಿಗೆ ಅನ್ಯಾಯವಾಗಿದೆ. ನಾಗೇಂದ್ರ ಭಟ್ಟ ಅವರು ಅವರು ಬೆಳೆದ ಲಕ್ಷಾಂತರ ರೂ ಮೌಲ್ಯದ ಅಡಿಕೆ ಹಾಗೂ ಕಾಳುಮೆಣಸು ಸೇರಿದಂತೆ ಇನ್ನಿತರ ಫಸಲು ಇನ್ನೂ ತೋಟದಲ್ಲಿದ್ದು, ಪ್ರತಿ ವರ್ಷ ಇದೇ ರಸ್ತೆ ಮಾರ್ಗವಾಗಿ ಅವನ್ನು ಅವರು ಮನೆಗೆ ತರುತ್ತಿದ್ದರು. ಆದರೆ, ಈ ಬಾರಿ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಿರುವುದರಿಂದ ತೋಟದಲ್ಲಿದ್ದ ಫಸಲು ಮನೆಗೆ ಬಂದಿಲ್ಲ.

300x250 AD

ರೈತರ ಭೂಮಿಗೆ ತೆರಳಲು ರಸ್ತೆ ಸಮಸ್ಯೆಗಳಿರುವ ಬಗ್ಗೆ ಮನಗಂಡ ಸರ್ಕಾರ 'ಅದನ್ನು ಆಯಾ ಹಂತದಲ್ಲಿಯೇ ಬಗೆಹರಿಸಬೇಕು' ಎಂದು ಹೊರಡಿಸಿದ ಆದೇಶದನ್ವಯ ತಮಗೆ ನ್ಯಾಯ ಕೊಡಿಸಿ ಎಂದು ನಾಗೇಂದ್ರ ಭಟ್ಟ ಅವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದ ಕಂದಾಯ ನಿರೀಕ್ಷಕರು ‘ಅರಣ್ಯ ಅತಿಕ್ರಮಿಸಿ ಕೃಷಿ ಮಾಡುತ್ತಿರುವ ವ್ಯಕ್ತಿಯೊಬ್ಬರು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಅವರು ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಿದ್ದಾರೆ. ಇದೇ ಮಾರ್ಗವಾಗಿ ನಾಗೇಂದ್ರ ಭಟ್ಟ ಅವರ ಮಾಲ್ಕಿ ಭೂಮಿಯೂ ಇದೆ’ ಎಂದು ವರದಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದಾಗ ಬೇಲಿ ನಿರ್ಮಿಸಿದ ವ್ಯಕ್ತಿ ಇದು ತಮ್ಮ ಖಾಸಗಿ ರಸ್ತೆ' ಎಂದು ವಾದಿಸಿದ್ದು, ಅದನ್ನು ಸಾಬೀತು ಮಾಡಲು ಯಾವುದೇ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿಲ್ಲ.ನ್ಯಾಯಕ್ಕಾಗಿ ಅಲೆದಾಟ ನಡೆಸಿ ಸಾಕಾಗಿದೆ. ಹಣಬಲ ಹೊಂದಿದವರ ಒತ್ತಡದಿಂದ ತಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ’ ಎಂದು ನಾಗೇಂದ್ರ ಭಟ್ಟ ದೂರಿದರು. `ಸಾರ್ವಜನಿಕ ರಸ್ತೆ ಅತಿಕ್ರಮಿಸಿ, ಅಲ್ಲಿ ಅದಕ್ಕೆ ಬೀಗ ಹಾಕಿದವರು ಪ್ರಭಾವಿಗಳಾಗಿದ್ದರಿಂದ ಈವರೆಗೂ ಬೇಲಿ ತೆರವು ಕಾರ್ಯ ನಡೆದಿಲ್ಲ. ನಮ್ಮ ತೋಟದಲ್ಲಿ ಬೆಳೆದ ಫಸಲು ಕೊಯ್ದು ಸಾಗಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಭೂಮಿಯನ್ನು ಕಬಳಿಸುವ ಹುನ್ನಾರದಿಂದ ಈ ರೀತಿ ಹಿಂಸೆ ನೀಡಲಾಗುತ್ತಿದೆ ಎಂದು ಎಂದು 77 ವರ್ಷದ ಕೃಷಿಕೆ ಸೀತಾ ಭಟ್ಟ ಅವರು ಅಳಲು ತೋಡಿಕೊಂಡರು.

Share This
300x250 AD
300x250 AD
300x250 AD
Back to top