Slide
Slide
Slide
previous arrow
next arrow

ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಹೋರಾಟ: ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ

300x250 AD

ಕಾರವಾರ: ನಗರದ ಬಾಂಡಿಶಿಟ್ಟಾ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಟ್ಟೆ ಪಾಡಿಗೆ ರಿಕ್ಷಾ ಚಲಾಯಿಸಿ ಜೀವನ ಮಾಡುವವರಿಗೆ ಬಹಳಷ್ಟು ನಷ್ಟವಾಗುತ್ತಿದೆ. ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಹೋರಾಟ ಮಾಡುವುದಾಗಿ ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆಯಿಂದ ನಗರಸಭೆಗೆ ಮನವಿ ಸಲ್ಲಿಸಲಾಯಿತು.
ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಆದರೂ ಅಧಿಕಾರಿಗಳು ಜೀವ ಹಾನಿ ಹಾಗೂ ವಾಹನದ ನಷ್ಟದ ಹೆಚ್ಚುತ್ತಿದ್ದು ಆದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯನ್ನು ಮಾಡಿದ್ದಾರೆ. ಕಾರವಾರ ನಗರ ಸಭೆಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಅನುದಾನ ಬಿಡುಗಡೆ ಮಾಡಿ ದುರಸ್ತಿ ಮಾಡುವಂತೆ ಕೇಳಿದರೆ ಹಣವಿಲ್ಲ ಎನ್ನುತ್ತಿದ್ದಾರೆ. ರಸ್ತೆ ದುರಸ್ತಿಗೆ ಗಮನಹರಿಸದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಹೊಂಡ ಇದೆಯೇ? ಹೊಂಡದಲ್ಲೇ ರಸ್ತೆಯ ಮಾಡಲಾಗಿದೆಯೇ ಎನ್ನುವ ಅನುಮಾನ ಬರುತ್ತಿದೆ ಎಂದು ದೂರಿದರು.
ಗುನಗಿವಾಡ ಹಾಗೂ ಹಬ್ಬುವಾಡಾದ ಸಾರ್ವಜನಿಕರು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಕಂಡುಬರುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮವಹಿಸಿ ರಸ್ತೆ ದುರಸ್ಥಿ ಮಾಡಿಕೊಡದೆ ಮುಂಬರುವ ದಿನಗಳಲ್ಲಿ ಸಂಭವಿಸುವ ಯಾವುದೇ ರಸ್ತೆ ಅಪಘಾತ, ಅನಾಹುತ, ಅವಘಡ ಜೀವಹಾನಿ ಆಗಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕರ್ನಾಟಕ ಸರಕಾರ ನೇರ ಹೊಣೆಗಾರರಾಗಿರುತ್ತಾರೆ ಎಂದು ಹೇಳಿದರು. ಕೃಷ್ಣಪ್ರಸಾದ ನಾಯ್ಕ, ರಾಜೇಶ ನಾಯ್ಕ, ಸಿದ್ದಪ್ಪ ಪೂಜಾರಿ ಹಾಗೂ ಆಟೋರಿಕ್ಷಾ ಚಾಲಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top