Slide
Slide
Slide
previous arrow
next arrow

ಮೊಬೈಲ್ ಬದಲು ಕುಟುಂಬದ ಜೊತೆ ಮಕ್ಕಳು ಕಾಲ ಕಳೆಯುವಂತಾಗಲಿ: ಶಾರದಾ ಶರ್ಮ

300x250 AD

ಹೊನ್ನಾವರ: ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದ್ದಾಗಿದೆ. ಮೊಬೈಲ್ ಬದಲು ಪಾಲಕರ ಜೊತೆ ಕಾಲ ಕಳೆಯುವ ದಿನ ಬರಬೇಕು. ಕುಟುಂಬದ ಸದಸ್ಯರ ಜೊತೆ ಬದುಕುವುದನ್ನು ಕಲಿಸಿ. ಮಕ್ಕಳು ವೃದ್ಯಾಪ್ಯದಲ್ಲಿ ಇರಬೇಕೆಂದರೆ ಬಾಲ್ಯದಲ್ಲಿ ಮಕ್ಕಳ ಜೊತೆ ಇರಬೇಕು ಎಂದು ಚಿಣ್ಣರ ಕಲರವ ಉದ್ಘಾಟಿಸಿದ ಕಡ್ನೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಕಿ ಶಾರದಾ ಶರ್ಮ ಮಾತನಾಡಿದರು.
ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇದು ಹೊಸತನದಿಂದ ಕೂಡಿರುವ ಕಾರ್ಯಕ್ರಮ. ಚಿಣ್ಣರು ಎಲ್ಲರಿಗೂ ಖುಷಿಯನ್ನು ನೀಡುತ್ತಾರೆ. ನಮ್ಮ ಬಾಲ್ಯದ ನೆನಪು ಮಾಡಿಕೊಂಡಾಗ ಅದು ವಿಶೀಷ ಅನಿಸಲ್ಲ. ಆದರೆ ಈಗಿನ ಮಕ್ಕಳು ಎಲ್ಲ ವಿಧವಾದ ಅನುಕೂಲವನ್ನು ಪಡೆದು ಬೆಳೆಯುತ್ತಿದ್ದಾರೆ. ಒತ್ತಡ ಹೇರದೆ ಶಿಕ್ಷಣ ನೀಡುವ ವಾತಾವರಣವನ್ನು ಕಲ್ಪಿಸಬೇಕು ಎಂದು ನುಡಿದರು. ನಾವು ಯಾವ ಶಾಲೆಗೆ ಮಕ್ಕಳನ್ನು ಕಳಿಸುತ್ತೇವೆ ಅನ್ನುವುದು ಸ್ಟೇಟಸ್ ಲೆಕ್ಕಾಚಾರ ಆಗಬಾರದು. ಉತ್ತಮ ಶಿಕ್ಷಣವನ್ನು ನೀಡುವ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು, ಸಂಸ್ಕಾರವನ್ನು ಬೆಳೆಸುವ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಿ ಎಂದು ಪಾಲಕರಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ , ಶಿವಾನಿ ಮಾತನಾಡಿ ನಮ್ಮ ಶಾಲೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವನ್ನು ಒದಗಿಸಿಕೊಟ್ಟಿದೆ.ನಮ್ಮ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳನ್ನು ನಾವು ಕಾರ್ಯಕ್ರಮಕ್ಕೆ ಕರೆಸಿ ಸಭೆಗೆ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಅದು ಪ್ರೇರಣೆಯಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು. ಶಾಲೆಯ ಕುರಿತಾಗಿ ಹಾಗೂ ಇಲ್ಲಿನ ವ್ಯವಸ್ಥೆಯ ಕುರಿತಾಗಿ ನೆರೆದ ಪಾಲಕರಿಗೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಅಂಗನವಾಡಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಛದ್ಮವೇಷ,ಭಕ್ತಿಗೀತೆ,ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲಕರೊಂದಿಗೆ ಭಾಗವಹಿಸಿದ್ದರು.
ಎಂ.ಪಿ.ಇ ಸೊಸೈಟಿಯ ಕಾರ್ಯದರ್ಶಿ ಎಸ್.ಎಂ.ಭಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾಚಾರ್ಯ ಕಾಂತಿ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಹನಾ ಹಾಗು ಶಾಂಭವಿ ಪ್ರಾರ್ಥಿಸಿದರು. ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿ ರಂಜಿಸಿದರು. ಶಿಕ್ಷಕ ಸುಜಯ್ ಭಟ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top