ಸಿದ್ದಾಪುರ: ಜನವರಿ 28ರಂದು ತಾಲೂಕಿನ ಬೇಡ್ಕಣಿಯ ಐತಿಹಾಸಿಕ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಬೇಡ್ಕಣಿಯ ದೈವಜ್ಞ ಮಿತ್ರ ವೃಂದ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ಜರುಗಿದ ತೃತೀಯ ವರ್ಷದ ರಾಜ್ಯಮಟ್ಟದ ಮೀಡಿಯಂ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ವಿತರಣಾ ಸಮಾರಂಭದ ಮುಖ್ಯ ಅತಿಥಿ ವಿ.ಎನ್.ನಾಯ್ಕ ಮಾತನಾಡಿ ಬೇಡ್ಕಣಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಕುಟುಂಬಗಳು ಬೆರಳೆಣಿಕೆಯಷ್ಟು ಇದ್ದರೂ ಅವರು ಸಮಾಜದಲ್ಲಿ ಗೌರವಯುತವಾಗಿ ಅಭಿಮಾನದಿಂದ ಹಾಗೂ ಪ್ರಾಮಾಣಿಕತೆಯಿಂದ ಜೀವನ ಸಾಗಿಸುತ್ತಿದ್ದು ಇಂತಹ ಬೃಹತ್ ಕ್ರಿಕೆಟ್ ಪಂದ್ಯಾವಳಿ ಆ ಯೋಜನೆ ಮಾಡುತ್ತಿರುವುದು ಬಹಳ ಸಂತೋಷವಾಗುತ್ತಿದೆ.ರಾಜ್ಯಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಈ ಪಂದ್ಯಾವಳಿಯು ಬೇಡ್ಕಣಿಯ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ನಡೆಯಲಿ ನಾವೆಲ್ಲರೂ ಬೆನ್ನೆಲುಬಾಗಿ ನಿಂತು ಕೈಜೋಡಿಸುತ್ತೇವೆ ಎಂದರು.ಇನ್ನೋರ್ವ ಅತಿಥಿ ಗ್ರಾಮ ಪಂಚಾಯತ್ ಸದಸ್ಯ ವೀರಪ್ಪ ಡಿ.ನಾಯಕ್ ಬೇಡ್ಕಣಿ ಈ ಪಂದ್ಯಾವಳಿಯ ಕುರಿತು ವಿವರಿಸಿ ಶ್ಲಾಘಿಸಿದರು.ವೇದಿಕೆಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಸಿದ್ದಾಪುರದ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತರಾಮ್ ವಿ.ಶೇಟ್, ಹಾಗೂ ಶ್ರೀ ಶನೇಶ್ವರ ದೇವಾಲಯದ ಅರ್ಚಕ ವೇದಮೂರ್ತಿ ಲಕ್ಷ್ಮಣ್ ರಾಮ ಭಟ್,ಮುಖ್ಯಅತಿಥಿ ಸಿದ್ದಾಪುರದ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಪ್ರಶಾಂತ ಡಿ.ಶೇಟ್,ಖ್ಯಾತ ಜೊತಿಷಿ ಸಂತೋಷ ಭಟ್ವ,ಶ್ರೀ ಶನೇಶ್ವರ ದೇವಾಲಯ ಬೇಡ್ಕಣಿಯ ಅರ್ಚಕ ಉಲ್ಲಾಸ ಭಟ್ವ, ಉಪಸ್ಥಿತರಿದ್ದರು.ಬೇಡ್ಕಣಿ ದೈವಜ್ಞ ಮಿತ್ರ ಮಂಡಳಿಯ ಅಧ್ಯಕ್ಷ ನಾಗರಾಜ್ ಎಲ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಪಂದ್ಯಾವಳಿಯಲ್ಲಿ ಕುಮಟಾದ ದೈವಜ್ಞ ಬಾಯ್ಸ್ ತಂಡ ವಿಜೇತರಾಗಿ ಪ್ರಥಮ ಸ್ಥಾನ ಪಡೆದಿದೆ.ಹಾಗೂ ಸಾಗರದ ದೈವಜ್ಞ ದೀಪ ತಂಡ ದ್ವಿತೀಯ ಸ್ಥಾನ ಪಡೆದಿದೆ. ಈ ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಕುಮಟಾದ ದೀಪಕ್ ನೇತಲ್ಕರ್, ಬೆಸ್ಟ್ ಬೌಲರ್ ಆಗಿ ಪ್ರಸಾದ್ ಎಸ್. ಶೇಟ್, ಹಾಗೂ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಸಮರ್ಥ ಸಾಗರ್ ಪಡೆದಿರುತ್ತಾರೆ. ಕುಮಾರಿ ನವ್ಯಶ್ರೀ ವೆಂಕಟೇಶ್ ಭಟ್ ಪ್ರಾರ್ಥನ ಗೀತೆ ಹಾಡಿದರು. ಸಂತೋಷ ಕೃಷ್ಣಮೂರ್ತಿ ಶೇಟ್ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿ, ಆಭಾರ ಮನ್ನಿಸಿದರು.ಸಿದ್ದಾಪುರದ ದೈವಜ್ಞ ಬ್ರಾಹ್ಮಣ ಯುವಕ ಸಂಘದ ಉಪಾಧ್ಯಕ್ಷ ಮಹೇಶ ವಿ. ಶೇಟ್ ಕಾರ್ಯಕ್ರಮ ನಿರೂಪಿಸಿದರು.ಈ ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ 14 ತಂಡಗಳು ಭಾಗವಹಿಸಿದ್ದವು.