Slide
Slide
Slide
previous arrow
next arrow

ದಾಂಡೇಲಿ ಪ್ರವಾಸೋದ್ಯಮಿ ಸುನೀಲ್ ದಂಡಗಲ್ ವಿಧಿವಶ

300x250 AD

ದಾಂಡೇಲಿ : ಪ್ರವಾಸೋದ್ಯಮಿ ಹಾಗೂ ನಗರದ ಸುಭಾಷ್ ನಗರದ ನಿವಾಸಿ ಸುನೀಲ್ ದಂಡಗಲ್ ಅವರು ಭಾನುವಾರ ರಾತ್ರಿ ಹೃದಯಘಾತದಿಂದಾಗಿ ವಿಧಿವಶರಾದರು. ಮೃತರಿಗೆ 47 ವರ್ಷ ವಯಸ್ಸಾಗಿತ್ತು.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸುನೀಲ್ ದಂಡಗಲ್ ಕಳೆದ ಕೆಲವು ವರ್ಷಗಳಿಂದ ದಾಂಡೇಲಿಯಲ್ಲಿ ಪ್ರವಾಸೋದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸುನೀಲ್ ದಂಡಗಲ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

300x250 AD

ಮೃತರು ತಾಯಿ ಓರ್ವ ಸಹೋದರ, ಇಬ್ಬರು ಸಹೋದರಿಯರು ಮತ್ತು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಸೇರಿದಂತೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top